Connect with us

LATEST NEWS

ಸಹೋದರರ ಅಪಹರಣದ ಹಿಂದೆ ಗೋಲ್ಡ್ ಸ್ಮಗ್ಲಿಂಗ್ ಜಾಲ…ರೌಡಿ ತಲ್ಲತ್ ಕೈವಾಡದಲ್ಲಿ ನಡೆದ ಅಪಹರಣ

ಮಂಗಳೂರು ಜನವರಿ 21: ಸಹೋದರರನ್ನು ಕಿಡ್ನಾಪ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ ಆವರು ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.


ಬಂಧಿತರನ್ನು ಉಪ್ಪಿನಂಗಡಿ ಕರುವೇಲು ಗ್ರಾಮದ ಅಬೂಬಕ್ಕರ್ ಸಿದ್ಧಿಕ್‌ (39), ಬಂಟ್ವಾಳ ಗಡಿಯಾರ ಗ್ರಾಮದ ಕಲಂದರ್ ಶಾಫಿ (22), ಬೆಳ್ತಂಗಡಿ ತಾಲ್ಲೂಕಿನ ಬಂಡಾರು ಗ್ರಾಮದ ಪೆರಲ್‌ ಪಡಿಕೆ ಹೌಸ್‌ನ ಮಹಮ್ಮದ್ ಇರ್ಷಾದ್‌ (28), ಬಂಟ್ವಾಳ ಪುದು ಗ್ರಾಮದ ಸುಜೀರ್‌ನ ಇರ್ಫಾನ್‌ (38) ಹಾಗೂ ನಗರದ ಪಾಂಡೇಶ್ವರ ಶಿವನಗರದ ಮೊಹಮ್ಮದ್‌ ರಿಯಾಜ್‌ (30) ಬಂಧಿತರು ಎಂದು ಪೊಲೀಸರು ಮಾಹಿತಿ ನೀಡಿದರು. ಕೊಯಿಲ ಗ್ರಾಮದ ನಿವಾಸಿ ನಿಜಾಮುದ್ದೀನ್, ಅವರ ಚಿಕ್ಕಮ್ಮನ ಮಗ ಶಾರುಖ್‌ ಮತ್ತು ಆತನ ಗೆಳೆಯನನ್ನು ಗುರುವಾರ ಪೆರ್ನೆ ಬಳಿಯ ಸೇಡಿಯಾಪುವಿನಿಂದ ಅಪಹರಿಸಿ ಹಲ್ಲೆ ನಡೆಸಿತ್ತು. ಶಾರುಖ್‌ನನ್ನು ಒತ್ತೆ ಇರಿಸಿಕೊಂಡ ದುಷ್ಕರ್ಮಿಗಳು, ನಿಜಾಮುದ್ದೀನ್‌ನನ್ನು ಮನೆಗೆ ಕಳುಹಿಸಿ 4ಲಕ್ಷ ಹಣ ತರುವಂತೆ ಸೂಚಿಸಿದ್ದರು. ನಿಜಾಮುದ್ದೀನ್‌ ಈ ಬಗ್ಗೆ ಉಪ್ಪಿನಂಗಡಿ ಠಾಣೆಗೆ ಶುಕ್ರವಾರ ದೂರು ನೀಡಿದ್ದರು.


ಪ್ರಕರಣದ ಬೆನ್ನತ್ತಿದ ಪೊಲೀಸರು ವಾಹನಗಳ ತಪಾಸಣೆ ಸಂದರ್ಭ ಪೊಲೀಸ ಮೇಲೆಯೇ ಕಾರನ್ನು ಹತ್ತಿಸಲು ಯತ್ನಿಸಿ ಪರಾರಿಯಾಗಿದ್ದರು, ಬಳಿಕ ಪರಾರಿಯಾದ ಕಾರನ್ನು ಶುಕ್ರವಾರ ಮಧ್ಯಾಹ್ನ ಕಂಡುಹಿಡಿಯುವಲ್ಲಿ ಪೊಲೀಸರು ಸಫಲವಾಗಿದ್ದರು.ಆರೋಪಿಗಳನ್ನು ಬಂಧಿಸಿ ಅಪರಹಣಕ್ಕೊಳಗಾಗಿದ್ದ ಶಾರುಖನನ್ನು ಬಿಡುಗಡೆಗೊಳಿಸಿದ್ದರು.

ಶಾರುಖ್‌ನ ದೊಡ್ಡಮ್ಮನ ಮಗ ಶಫೀಕ್‌ ಕೂಡಾ ಸೌದಿ ಅರೇಬಿಯಾದಲ್ಲಿದ್ದಾನೆ. ಶಫೀಕ್‌ ಎರಡು ತಿಂಗಳ ಹಿಂದೆ ಚಿನ್ನದ ಬಿಸ್ಕೆಟ್‌ ಅನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಿ ಯಾರಿಗೊ ತಲುಪಿಸುವ ಹೊಣೆ ಹೊತ್ತಿದ್ದ. ಆದರೆ, ವಿದೇಶದಿಂದ ಭಾರತಕ್ಕೆ ಬಂದಿದ್ದ ಆತ ಚಿನ್ನದ ಬಿಸ್ಕೆಟ್‌ ಅನ್ನು ತಲುಪಿಸಬೇಕಾದವರಿಗೆ ತಲುಪಿಸಿರಲಿಲ್ಲ. ಆತನ ಚಿಕ್ಕಮ್ಮನ ಮಗ ಶಾರುಖ್‌ ಸೌದಿಯಿಂದ ಊರಿಗೆ ಮರಳಿದ್ದು ಆರೋಪಿ ಕಡೆಯವರಿಗೆ ಗೊತ್ತಾಗಿತ್ತು. ಶಾರುಖ್‌ನನ್ನು ಅಪಹರಿಸಿ ಸುಮಾರು 40 ಲಕ್ಷ ಮೌಲ್ಯದ ಚಿನ್ನದ ಬಿಸ್ಕೆಟ್‌ ಮರಳಿ ಪಡೆಯುವುದು ಅವರ ಉದ್ದೇಶವಾಗಿತ್ತು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಈ ಪ್ರಕರಣದ ಹಿಂದೆ ರೌಡಿ ಶೀಟರ್‌ ತಲ್ಲತ್‌ ಕೈವಾಡ ವಿದ್ದು ಆತನ ಆಣತಿ ಮೇಲೆ ಆರೋಪಿಗಳು ಈ ಕೆಲಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *