Connect with us

DAKSHINA KANNADA

ಮಂಗಳೂರು : ಕದ್ರಿ ಪಾರ್ಕ್ ವೈನ್ ಮೇಳಕ್ಕೆ ಚಾಲನೆ, ವೈನ್ ಖರೀದಿ ಭರಾಟೆ ಬಲು ಜೋರು..!

ಮಂಗಳೂರು: ರತ್ನಾಸ್ ವೈನ್ ಗೇಟ್ ಹಾಗೂ ಶೂಲಿನ್ ಗ್ರೂಪ್ ಮಂಗಳೂರು ಪ್ರಾಯೋಜಕತ್ವದಲ್ಲಿ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ (ಸರ್ಕಾರಿ ಸ್ವಾಮ್ಯದ ಸಂಸ್ಥೆ) ಹಾಗೂ ತೋಟಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಕದ್ರಿಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ದ್ರಾಕ್ಷಾ ರಸ ಪ್ರದರ್ಶನ, (Wine Festival) ಮಾರಾಟ ಹಾಗೂ ಬೃಹತ್ ವೈನ್ ಮೇಳಕ್ಕೆ ಶನಿವಾರ ಚಾಲನೆ ನೀಡಲಾಯಿತು.


ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ವೈನ್ ಮೇಳ ಉದ್ಘಾಟಿಸಿದರು. ವೈನ್ ಆರೋಗ್ಯಕರ ಪೇಯ. ಮುಂಬರುವ ಕ್ರಿಸ್ಮಸ್, ಹೊಸ ವರ್ಷ ವೈನ್ ಮೇಳದ ಸಂಭ್ರಮ ಹೆಚ್ಚಿಸಿದೆ. ಮಂಗಳೂರು ಜನತೆ ವೈನ್ ಖರೀದಿಸುವ ಮೂಲಕ ದ್ರಾಕ್ಷಿ ಬೆಳೆಗಾರರಿಗೆ ಪ್ರೋತ್ಸಾಹ ನೀಡಬೇಕು. ಇಂತಹ ಮೇಳಗಳಿಗೆ ದೊಡ್ಡ ಸಂಸ್ಥೆಗಳು ಸಹಕಾರ ನೀಡಬೇಕು ಎಂದರು.
ಕಾಂಗ್ರೆಸ್ ಮುಖಂಡ ಮಿಥುನ್ ರೈ ಅತಿಥಿಯಾಗಿ, ಮಂಗಳೂರಿನಲ್ಲಿ ಪ್ರತಿ ವರ್ಷ ವೈನ್ ಮೇಳ ಆಯೋಜಿಸಿ ದ್ರಾಕ್ಷಿ ಬೆಳೆಗಾರರಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ದೇಶೀಯ ಹಾಗೂ ವಿದೇಶ ವೈನ್‌ಗಳಿದ್ದು, ಜನತೆ ಇದರ ಸದುಪಯೋಗ ಪಡೆಯಬೇಕು ಎಂದರು.

ರತ್ನಾಸ್ ವೈನ್ ಗೇಟ್‌ನ ರಮೇಶ್ ನಾಯಕ್ ಮಾತನಾಡಿ, ವೈನ್ ಎಂದರೆ ದ್ರಾಕ್ಷಾ ರಸ. ದೇಹದ ರಕ್ತ ಪರಿಚಲನೆಗೆ, ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಪುರುಷರು, ಮಹಿಳೆಯರು ಇದನ್ನು ಕುಡಿಯುವುದರಲ್ಲಿ ತಪ್ಪಿಲ್ಲ ಎಂದರು. ಪಾಲುದಾರ ಸುಧಾಕರ ನಾಯಕ್, ಸುಚಿತ್ರ ನಾಯಕ್, ಮನಪಾ ಸದಸ್ಯೆ ಶಕೀಲಾ ಕಾವ, ಪ್ರವೀಣ್ ಮೊದಲಾದವರಿದ್ದರು.
 ಭಾನುವಾರ ಮೇಳ ಕೊನೆ
‘ಪ್ರದರ್ಶನ-ಸವಿಯುವಿಕೆ-ಮಾರಾಟ’ ಎಂಬ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ವೈನ್ ಮೇಳ ಡಿ.8ರಂದು ಭಾನುವಾರ ಕೊನೆಗೊಳ್ಳಲಿದೆ. ದ್ರಾಕ್ಷಾ ರಸ ಉತ್ಪಾದಕ ಸಂಸ್ಥೆಗಳ ಮೂಲಕ ಅತ್ಯಾಕರ್ಷಕ ದರ ಹಾಗೂ ಅತ್ಯುತ್ತಮ ಕೊಡುಗೆಗಳೊಂದಿಗೆ ಮಾರಾಟವನ್ನು ಏರ್ಪಡಿಸಲಾಗಿದೆ. ಮೊದಲ ದಿನವೇ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಭಾನುವಾರ ರಜಾ ದಿನವಾದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬರುವ ನಿರೀಕ್ಷೆ ಇದೆ ಎಂದು ರಮೇಶ್ ನಾಯಕ್ ತಿಳಿಸಿದ್ದಾರೆ.

Share Information
Continue Reading
Advertisement
1 Comment

1 Comment

  1. Pingback: ಮಂಗಳೂರು : ಕದ್ರಿ ಪಾರ್ಕ್‌ನಲ್ಲಿ ಡಿ 7 ರಿಂದ ಎರಡು ದಿನಗಳ ಬೃಹತ್ 'ವೈನ್' ಮೇಳ..!! - themangaloremirror.in

Leave a Reply

Your email address will not be published. Required fields are marked *