LATEST NEWS
ಮಂಗಳೂರು -ರೈಲಿನಲ್ಲಿ ಪತ್ತೆಯಾದ 3.16 ಲಕ್ಷ ಮೌಲ್ಯದ ಗಾಂಜಾ ಬ್ಯಾಗ್

ಮಂಗಳೂರು ಅಗಸ್ಟ್ 11: ಮಂಗಳೂರು ಜಂಕ್ಷನ್ ನಲ್ಲಿ 3.16 ಲಕ್ಷ ಮೌಲ್ಯದ 6.33 ಕೆಜಿ ತೂಕದ ಗಾಂಜಾ ಇರುವ ಬ್ಯಾಗ್ ಒಂದು ಪತ್ತೆಯಾಗಿದೆ. ಕಾರವಾರ– ಯಶವಂತಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ನಿಯಮಿತ ತಪಾಸಣೆ ವೇಳೆ ಈ ಬ್ಯಾಗ್ ಪತ್ತೆಯಾಗಿದೆ.
ಅನಾಮಿಕ ವ್ಯಕ್ತಿಗೆ ಸೇರಿದ ಬ್ಯಾಗ್‌ನಲ್ಲಿ ಗಾಂಜಾ ಇತ್ತು ಎನ್ನಲಾಗಿದೆ. ಪ್ರಕರಣದ ಸಂಬಂಧ ಯಾರನ್ನೂ ಬಂಧಿಸಿಲ್ಲ. ಮಂಗಳೂರು ಪೂರ್ವ ಅಬಕಾರಿ ವಿಭಾಗದಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Continue Reading