LATEST NEWS
ಲವ್ ಜಿಹಾದ್ ಬಲೆಗೆ ಬಿದ್ದ ಯುವತಿಯಿಂದ ಲವರ್ ಗೆ ಗಾಂಜಾ ಸಪ್ಲೈ
ಲವ್ ಜಿಹಾದ್ ಬಲೆಗೆ ಬಿದ್ದ ಯುವತಿಯಿಂದ ಲವರ್ ಗೆ ಗಾಂಜಾ ಸಪ್ಲೈ
ಮಂಗಳೂರು ಅಕ್ಟೋಬರ್ 13: ಒಂದು ಕೊಲೆ, ಒಂದು ಕೊಲೆ ಯತ್ನ ಪ್ರಕರಣದ ಖೈದಿಗೆ ಜೈಲಿನಲ್ಲಿ ಗಾಂಜಾ ಪೂರೈಕೆ ಮಾಡುತ್ತಿದ್ದ ವೇಳೆ ವಿದ್ಯಾರ್ಥಿನಿ ರೆಡ್ ಹ್ಯಾಂಡ್ ಆಗಿ ಪೊಲೀಸ್ ಬಲೆಗೆ ಬಿದ್ದಿರುವ ಘಟನೆ ಮಂಗಳೂರು ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ಮಂಗಳೂರು ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ವಿದ್ಯಾರ್ಥಿನಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾಳೆ. 2005ರಲ್ಲಿ ವಾಮಂಜೂರಿನಲ್ಲಿ ನಡೆದ ಚರಣ್ ಕೊಲೆ,ಮತ್ತು ಹಫ್ತಾ ಗಾಗಿ ಕೊಲೆಯತ್ನ ನಡೆಸಿದ ಮುಸ್ತಫಾ ಎಂಬಾ ಆರೋಪಿಗೆ ವಿದ್ಯಾರ್ಥಿನಿ ನಿರಂತರವಾಗಿ ಗಾಂಜಾ ಸಫ್ಲೈ ಮಾಡುತ್ತಿದ್ದಳು. ಇಂದೂ ಕೂಡಾ ಸಂದರ್ಶನ ದ ವೇಳೆಯಲ್ಲಿ ಗಾಂಜಾ ಜೊತೆಗೆ ಮೊಬೈಲ್ ನ್ನೂ ವಿದ್ಯಾರ್ಥಿನಿ ಖೈದಿಗೆ ನೀಡಿದ್ದು ಈ ವೇಳೆ ರೆಡ್ ಹ್ಯಾಂಡ್ ಆಗಿ ಪೊಲೀಸ್ ಬಲೆಗ ಸಿಕ್ಕಿಬಿದ್ದಿದ್ದಾಳೆ.
ಲವ್ ಜಿಹಾದ್ ಬಲೆಗೆ ವಿದ್ಯಾರ್ಥಿನಿ ಬಿದ್ದು ಈ ಕೃತ್ಯ ನಡೆಸಿರೋದಾಗಿ ಹೇಳಲಾಗಿದೆ. ಮುಸ್ತಫಾ ನಾ ಜೊತೆ ವಿದ್ಯಾರ್ಥಿನಿಗೆ ಕಳೆದ ಕೆಲ ಸಮಯದಿಂದ ಪ್ರೇಮವಾಗಿದ್ದು, ರೌಡಿಯನ್ನು ನೋಡಲು ನಿರಂತರವಾಗಿ ಜೈಲಿಗೆ ಬರುತ್ತಿದ್ದಳು. ಈ ವೇಳೆ ಮುಸ್ತಾಫಾ ಗೆ ಗಾಂಜಾವನ್ನೂ ಸಫ್ಲೈ ಮಾಡುತ್ತಿದ್ದಳು.
ಕಳೆದ ಕೆಲ ದಿನಗಳಿಂದ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವ ಇಂಗಿತವನ್ನೂ ಮುಸ್ಲಿಂ ಸ್ನೇಹಿತರ ಜೊತೆ ಹಂಚಿಕೊಂಡಿದ್ದಳು ಎಂದು ಹೇಳಲಾಗಿದೆ. ಬರ್ಕೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ವಿದ್ಯಾರ್ಥಿನಿ ಎನ್ನುವ ಕಾರಣಕ್ಕೆ ಪೊಲೀಸರು ಪೋಷಕರಿಗೆ ಮಾಹಿತಿ ನೀಡಿ ಬಿಡುಗಡೆಗೊಳಿಸಿದ್ದಾರೆ..ಕರಾವಳಿಯಲ್ಲಿ ಲವ್ ಜಿಹಾದ್ ಸದ್ದು ಕ್ಷೀಣವಾಗುವ ವೇಳೆ ಗಂಭೀರ ಪ್ರಕರಣ ಬೆಳಕಿಗೆ ಬಂದಿದ್ದು ನಾಗರಿಕರನ್ನು ಬೆಚ್ಚಿ ಬೀಳಿಸಿದೆ..