LATEST NEWS
ಮಂಗಳೂರು ಜೈಲ್ ನಲ್ಲಿ ಕೈದಿಗಳ ನಡುವೆ ಹೊಡೆದಾಟ..ಇಬ್ಬರಿಗೆ ಗಾಯ

ಮಂಗಳೂರು ಎಪ್ರಿಲ್ 25: ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ನಡುವೆ ನಡೆದ ಮಾರಾಮಾರಿಯಲ್ಲಿ ಇಬ್ಬರು ಗಾಯಗೊಂಡ ಘಟನೆ ಇಂದು ನಡೆದಿದೆ. ಪಣಂಬೂರು ಠಾಣೆಯಲ್ಲಿ ದರೋಡೆ ಪ್ರಕರಣದಲ್ಲಿ ಮುಲ್ಕಿ ಪೊಲೀಸರಿಂದ ಇತ್ತೀಚೆಗೆ ಬಂಧಿತನಾಗಿದ್ದ ಸಮೀರ್ ಎಂಬಾತ ಜೈಲಿನಲ್ಲಿದ್ದ ಇತರ ವಿಚಾರಣಾಧೀನ ಕೈದಿಗಳಿಗೆ ಹಲ್ಲೆ ನಡೆಸಿದ್ದಾನೆ.
ಬೆಳಗ್ಗಿನ ಉಪಾಹಾರದ ಸಮಯದಲ್ಲಿ ಮಾರಾಮಾರಿ ನಡೆದಿದ್ದು ಸಮೀರ್ ಸ್ಟೀಲ್ ಚಮಚ ಮತ್ತಿತರ ಅಡುಗೆ ಸಾಮಗ್ರಿಗಳನ್ನು ಬಳಸಿ, ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಅನ್ಸಾರ್ ಮತ್ತು ಮೂಡುಬಿದ್ರೆ ದರೋಡೆ ಪ್ರಕರಣದ ಜೈನುದ್ದೀನ್ ಎಂಬಾತ ಕೂಡ ಗಾಯಗೊಂಡಿದ್ದಾನೆ.

ಅನ್ಸಾರ್ ಕೈ ಮತ್ತು ಕಾಲಿಗೆ ಗಾಯಗಳಾಗಿದ್ದರೆ, ಜೈನುದ್ದೀನ್ ಭುಜ ಮತ್ತು ಬೆನ್ನಿಗೆ ಗಾಯಗಳಾಗಿವೆ. ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸುವ ಕಾರ್ಯ ನಡೆಸಲಾಗುತ್ತಿದೆ.
ಜೈಲಿಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ ನೀಡಿದ್ದಾರೆ.