Connect with us

    DAKSHINA KANNADA

    Mangalore ‘ಬ್ಯೂಟಿಷನ್ ಕೋರ್ಸ್’ ಗೆ  ಮಹಿಳೆಯರಿಂದ ಅರ್ಜಿ ಆಹ್ವಾನ

    ಮಂಗಳೂರು : ಮಂಗಳೂರಿನ ಯೆಯ್ಯಾಡಿಯಲ್ಲಿರುವ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಮಹಿಳಾ ವಿಭಾಗದ ವತಿಯಿಂದ ಜೂನ್ 24 ರಿಂದ ಜುಲೈ 5 ರ ವರೆಗೆ 10 ದಿನಗಳ ಕಾಲ ಬ್ಯೂಟಿಷನ್ ಕೋರ್ಸ್(beautician course) ಏರ್ಪಡಿಸಲಾಗಿದೆ.

    ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ನಡೆಯಲಿದೆ.

    ಸದರಿ ಕಾರ್ಯಾಗಾರದಲ್ಲಿ ಥ್ರೆಡ್ಡಂಗ್, ಪೆಡಿಕ್ಯೂರ್, ಮೆನಿಕ್ಯೂರ್, ವ್ಯಾಕ್ಸಿಂಗ್ ಹಾಗೂ ಬ್ಲೀಚಿಂಗ್ ತರಬೇತಿ ನೀಡಲಾಗುವುದು.

    ತರಬೇತಿ ಶುಲ್ಕವನ್ನು ಅಭ್ಯರ್ಥಿಯ ಪ್ರವೇಶ ನೋಂದಣಿ ಸಮಯದಲ್ಲಿ ಪಡೆಯಲಾಗುವುದು. ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ: 9483791031 ಸಂಪರ್ಕಿಸಬಹುದು ಎಂದು ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply