DAKSHINA KANNADA
ಮಂಗಳೂರು : ಗುರುಪುರ ಫಲ್ಗುಣಿ ನದಿ ಹರಿವಿನ ಮಟ್ಟದಲ್ಲಿ ಏರಿಕೆ, ನಡು ರಾತ್ರಿ ಗ್ರಾಮಗಳಿಗೆ ‘ಬೊಳ್ಳ’..!

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಮುಂಜಾನೆಯಿಂದ ಮಳೆ ಕೊಂಚ ತಗ್ಗಿದೆ ಆದ್ರೂ ಘಟ್ಟ ಪ್ರದೇಶಗಳಲ್ಲಿ ಮಳೆ ಮುಂದುವರೆದ್ದರಿಂದ ನದಿಗಳಲ್ಲಿ ನೀರಿನ ಮಟ್ಟ ಏರಿಕೆ ಕಂಡು ಆನೆಕ ಕಡೆ ನೆರೆ ನೀರು ನಿಂತು ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಂಗಳೂರು ನಗರದಲ್ಲಿ ರಾತ್ರಿ ಸುರಿದ ಮಳೆ ಹೊರವಲಯದ ಗುರುಪುರ ಫಲ್ಗುಣಿ ನದಿ ಹರಿವಿನ ಮಟ್ಟದಲ್ಲಿ ಏರಿಕೆ ಕಂಡು ಸುತ್ತ ಮುತ್ತಲ ಗ್ರಾಮಗಳಿಗೆ ನೀರು ನುಗ್ಗಿತ್ತು.ಮೂಡುಶೆಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಬಿ ದಿಡ್ಪೆ ಹೌಸ್ ಸಂಜೀವ್ ಅವರ ಮನೆಗೆ ನೀರು ನುಗ್ಗಿತ್ತು.ರಾತ್ರಿ ವೇಳೆ ಮನೆ ಒಳಗೆ ನೀರು ನುಗ್ಗಿತ್ತು. ಆದ್ರೆ ಗ್ರಾಮೀಣ ಪ್ರದೇಶವಾದ ಕಾರಣ ಕಾರ್ಯಾಚರಣೆ ನಡೆಸಲಾಗದೆ ಇಂದು ಬೆಳಿಗ್ಗೆ ಮಂಗಳೂರು ಪಾಂಡೇಶ್ವರ ಅಗ್ನಿ ಶಾಮಕ ದಳದ ಅಧಿಕಾರಿಗಳು ಭೇಟಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಅಗ್ನಿ ಶಾಮಕ ದಳದ ಅಧಿಕಾರಿ ಪ್ರವೀಣ್ ಕೆ ಎನ್, ಲೀಡಿಂಗ್ ಫೈಯರ್ ಮ್ಯಾನ್ ಗಿರಿಧರ್, ಸ್ಥಳೀಯ ಪಂಚಾಯತ್ ವಿ.ಎ ಸಂತೋಷ್, ಪಂಚಾಯತ್ ಅಧ್ಯಕ್ಷ ಅನೀಲ್, ಸ್ಥಳೀಯ ಪಂಚಾಯತ್ ಸದಸ್ಯರಾದ ಕಿರಣ್ ಶೆಟ್ಟಿ, ಸುಕೇಶ್ ಕೊಟ್ಟಾರಿ, ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ರಕ್ಷಣಾ ಕಾರ್ಯದಲ್ಲಿ ಭಾಗಿ ಬೋಟ್ ಮೂಲಕ ಮನೆಯಲ್ಲಿದ್ದವರನ್ನು ಸ್ಥಳಾಂತರ ಮಾಡಿದ್ದಾರೆ.