ಬಿಜೈ ಬಳಿಯ ವಸತಿ ಸಮುಚ್ಚಯದಲ್ಲಿ ಅಗ್ನಿ ಅನಾಹುತ

ಮಂಗಳೂರು ಮಾರ್ಚ್ 21: ಮಂಗಳೂರು ನಗರದ ಬಿಜೈ ಸರ್ಕಲ್ ನ ಮಾರುಕಟ್ಟೆ ಬಳಿ ಇರುವ ವಸತಿ ಸಮುಚ್ಚಯೊಂದರ ಏಳನೇ ಮಹಡಿಯ ಪ್ಲ್ಯಾಟ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಠಿಸಿತ್ತು.

ಬಿಜೈ ಸರ್ಕಲ್ ನ ಮಾರುಕಟ್ಟೆ ಬಳಿ ಇರುವ 7 ಮಹಡಿಗಳ ಪ್ಲ್ಯಾಟ್ ಇದಾಗಿದ್ದು, ಏಳನೇ ಮಹಡಿಯ ಮನೆ ಒಂದರಲ್ಲಿ ಸಂಜೆ 4 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.ಈ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ಲ್ಯಾಟ್ ನಲ್ಲಿದ್ದ ಎಲ್ಲಾ ಜನರನ್ನು ತೆರವುಗೊಳಿಸಲಾಗಿದೆ.
ಸ್ಥಳಕ್ಕೆ ಪಾಂಡೇಶ್ವರ ಅಗ್ನಿ ಶಾಮಕದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಅಗ್ನಿ ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ.

VIDEO

4 Shares

Facebook Comments

comments