Connect with us

DAKSHINA KANNADA

ಮಂಗಳೂರು : ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ನಕಲಿ ಇ- ಚಲನ್, ವ್ಯಕ್ತಿಯ ಖಾತೆಯಿಂದ 1.31 ಲಕ್ಷ ರೂ. ಖೋತಾ..!

ಮಂಗಳೂರು:ಸರಕಾರದ ‘ಪರಿವಾಹನ್‌’ ಆ್ಯಪ್‌ನ ಹೆಸರಿನಲ್ಲಿ ಈಗ ಸೈಬರ್‌ ವಂಚಕರು ಹಣ ದೋಚಲು ಆರಂಭಿಸಿದ್ದಾರೆ.  ಸಂಚಾರ ನಿಯಮ ಉಲ್ಲಂಘನೆಯ ಬಗ್ಗೆ ವಾಟ್ಸಾಪ್ ಮೂಲಕ ನಕಲಿ ಇ-ಚಲನ್‌ ಮತ್ತು ಲಿಂಕ್ ಕಳಿಸಿ  ವ್ಯಕ್ತಿಯೋರ್ವರ ಖಾತೆಯಿಂದ 1.31 ಲ.ರೂ. ಹಣವನ್ನು ಲಪಟಾಯಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಬಗ್ಗೆ ಸೆನ್ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ನ. 24ರಂದು ನಗರದ ವ್ಯಕ್ತಿಯೋರ್ವರಿಗೆ +917878422870 ನೇ ವಾಟ್ಸ್‌ ಆ್ಯಪ್‌ ನಂಬರ್‌ನಿಂದ ಮೆಸೇಜ್‌ ಬಂದಿದ್ದು, ಅದರಲ್ಲಿ VAHAN PARIVAHAN.apk ಫೈಲ್‌ ಇತ್ತು. ಅದನ್ನು ಡೌನ್‌ಲೋಡ್‌ ಮಾಡಿದಾಗ ಅವರ ಮೊಬೈಲ್‌ಗೆ 16 ಒಟಿಪಿಗಳು ಬಂದಿದ್ದವು.  ಆ OTP ಗಳನ್ನು ಯಾರಿಗೂ ಅವರು ಕಳಹಿಸಿರಲಿಲ್ಲ. ಅನಂತರ ಅವರ ಫ್ಲಿಪ್‌ಕಾರ್ಟ್‌ ಹಾಗೂ ಅಮೆಜಾನ್‌ನಲ್ಲಿ ಅವರ ಕ್ರೆಡಿಟ್‌ ಕಾರ್ಡ್‌ ಮೂಲಕ 30,400 ರೂ., ಡೆಬಿಟ್‌ ಕಾರ್ಡ್‌ ಮೂಲಕ 16,700 ರೂ. ಮತ್ತು ಪೇ ಲೇಟರ್‌ನಲ್ಲಿ 71,496 ರೂ. ಹಣ ವರ್ಗಾವಣೆಯಾದ ಬಗ್ಗೆ ಮೊಬೈಲ್‌ಗೆ ಮೆಸೇಜ್‌ ಬಂದಿತ್ತು. ಕೂಡಲೇ ಅವರು ತನ್ನ ಮೊಬೈಲ್‌ ಮೂಲಕ ಡೆಬಿಟ್‌ ಕಾರ್ಡ್‌ ಹಾಗೂ ಕ್ರೆಡಿಟ್‌ ಕಾರ್ಡ್‌ ಅನ್ನು ಬ್ಲಾಕ್‌ ಮಾಡಿಸಿದ್ದರು.

ಯಾರೋ ಅಪರಿಚಿತರು ಎಪಿಕೆ ಫೈಲ್‌ನ ಮೂಲಕ ಅವರ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ನ ಮಾಹಿತಿ ಪಡೆದು ಫ್ಲಿಪ್‌ಕಾರ್ಟ್‌ನಲ್ಲಿ 39,398 ರೂ. ಮೌಲ್ಯದ ವನ್‌ಪ್ಲಸ್‌ ಮೊಬೈಲ್‌, 32,398 ರೂ. ಮೌಲ್ಯದ ಮೊಟೊರೊಲಾ ಎಜ್‌ ಮೊಬೈಲ್‌, 12,800 ರೂ. ಮೌಲ್ಯದ ಏರ್‌ಪೋಡ್‌, 14,700 ರೂ. ಹಾಗೂ 29,400 ರೂ. ಹಾಗೂ 3,000 ರೂ. ಮೌಲ್ಯದ ಫ್ಲಿಪ್‌ಕಾರ್ಟ್‌ ವೋಚರ್‌ಗಳನ್ನು ಹೊಸದಿಲ್ಲಿಯ ವಿಳಾಸದಲ್ಲಿರುವ ವ್ಯಕ್ತಿಗೆ ಆರ್ಡರ್‌ ಮಾಡಿ ಒಟ್ಟು 1,31,396 ರೂ. ವಂಚಿಸಿರುವುದು ಗೊತ್ತಾಗಿದೆ. ಈ ಬಗ್ಗೆ ಮಂಗಳೂರಿನ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಪಿಕೆಯ ವಿಸ್ತೃತ ರೂಪ “ಆ್ಯಂಡ್ರಾಯ್ಡ ಪ್ಯಾಕೇಜ್‌ ಕಿಟ್‌’ .ಎಪಿಕೆ ಫೈಲ್‌ಗ‌ಳು ಭಾರೀ ಪವರ್‌ಫ‌ುಲ್‌. ಇವು ಮೊಬೈಲ್‌ನಲ್ಲಿರುವ ಗ್ಯಾಲರಿ, ಕೆಮರಾ ಮೊದಲಾದವುಗಳ ಆ್ಯಕ್ಸೆಸ್‌ಗೆ ಪರ್ಮಿಷನ್‌ ಕೇಳುವುದಿಲ್ಲ. ನೇರವಾಗಿ ಆ್ಯಕ್ಸೆಸ್‌ ಮಾಡಿಕೊಳ್ಳುತ್ತವೆ. ಹಾಗಾಗಿ ಇಂತಹ ಫೈಲ್‌ಗ‌ಳನ್ನು ತೆರೆಯಬಾರದು. ಡೌನ್‌ಲೋಡ್‌ ಮಾಡಬಾರದು.

Share Information
Continue Reading
Advertisement
1 Comment

1 Comment

    Leave a Reply

    Your email address will not be published. Required fields are marked *