DAKSHINA KANNADA
ಮಂಗಳೂರು : ಕೊಡಿಯಲ್ ಬೈಲ್ ಮನೆ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ, 1.64 ಲಕ್ಷ ಮೌಲ್ಯದ ಅಕ್ರಮ ಮದ್ಯ ವಶ..!
ಮಂಗಳೂರು ನಗರದ ಕೊಡಿಯಲ್ ಬೈಲ್ ನ ಮನೆಯೊಂದ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಭಾರಿ ಪ್ರಮಾಣದಲ್ಲಿ ದಾಸ್ತಾನು ಮಾಡಿದ ಅಕ್ರಮ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.
ಮಂಗಳೂರು : ಮಂಗಳೂರು ನಗರದ ಕೊಡಿಯಲ್ ಬೈಲ್ ನ ಮನೆಯೊಂದ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಭಾರಿ ಪ್ರಮಾಣದಲ್ಲಿ ದಾಸ್ತಾನು ಮಾಡಿದ ಅಕ್ರಮ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.
ಅಬಕಾರಿ ಜಂಟಿ ಆಯುಕ್ತರು ( ಜಾರಿ ಮತ್ತು ತನಿಖೆ) ಡಾ|| ಸಿ.ಹೆಚ್ ಬಾಲಕೃಷ್ಣ ಅವರ ಆದೇಶದ ಮೇರೆಗೆ ಅಬಕಾರಿ ಉಪ ಆಯುಕ್ತ ಟಿ.ಎಂ ಶ್ರೀನಿವಾಸರವರ ನಿರ್ದೇಶನದಂತೆ ಅಬಕಾರಿ ಉಪ ಅಧೀಕ್ಷಕರಾದ ಸಂತೋಷ ಮೋಡಗಿ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೊಡಿಯಾಲಬೈಲ್ ಗ್ರಾಮದ ಕಂಬಳಾಕ್ರಾಸ್ ಬಳಿಯಲ್ಲಿರುವ ಎಸ್ ಎಸ್ ಕಾಂಪೌಂಡ್ ಕಟ್ಟಡದ ಮೊದಲನೆ ಮಹಡಿಯ ಮನೆಯೊಂದರ ಮೇಲೆ ದಾಳಿ ನಡೆಸಿದಾಗ ಈ ಅಕ್ರಮ ಪತ್ತೆಯಾಗಿದೆ. ಯೋಧರಿಗಾಗಿ ಮೀಸಲಿಟ್ಟಿರುವ 19.5 ಲೀಟರ್, ಗೋವಾ ರಾಜ್ಯದ 52.5 ಲೀಟರ್, ಕರ್ನಾಟಕ ರಾಜ್ಯದ ಮದ್ಯ 3 ಲೀಟರ್ ,ತೆರಿಗೆರಹಿತ ವಿದೇಶ ಮದ್ಯ 3 ಲೀಟರ್ , ಗೋವಾ ರಾಜ್ಯದ ಬಿಯರ್ 21.5 ಲೀಟರ್ , ಕರ್ನಾಟಕ ರಾಜ್ಯದ ಬಿಯರ್ 0.33 ಲೀಟರ್ 7 ಕ್ಯಾನ್ ಮತ್ತು abo-1.300 ಲೀಟರ್, 23 ಕ್ಯಾನ್, 101.30 ಲೀಟರ್ IML+BEER ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಪ್ರಮುಖ ಆರೊಪಿ ಅಮೀತ್ ಎ ಪಿ ಎಂಬವನು ತಲೆಮರೆಸಿಕೊಂಡಿದ್ದಾನೆ.
ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ.1,64,205/- ಎಂದು ಅಂದಾಜಿಸಲಾಗಿದೆ. ಯಾವುದೇ ದಾಖಲಾತಿಗಳಿಲ್ಲದೆ ಮಾರಾಟ ಮಾಡುವ ಉದ್ದೇಶದಿಂದ ಹೊಂದಿದ್ದು ಕರ್ನಾಟಕ ಅಬಕಾರಿ ಕಾಯ್ದೆ 1965 ರ ನಿಯಮ 14, 15 ರಂತೆ ಅಪರಾಧವಾಗಿದ್ದು ಕಲಂ 32(1), 38(ಎ) ಮತ್ತು 43(ಎ) ರಂತೆ ಶಿಕ್ಷಾರ್ಹವಾಗಿರುವುದರಿಂದ ಈ ಪ್ರಕರಣವನ್ನು ಮಂಗಳೂರು ದಕ್ಷಿಣ ವಲಯ-1 ರ ಅಬಕಾರಿ ಉಪ ನಿರೀಕ್ಷಕರು-1 ರಾದಶ್ರೀ ಹರೀಶ ಪಿ ಇವರು ದಾಖಲಿಸಿರುತ್ತಾರೆ. ಇದೊಂದು ಅಂತರ್ ಜಿಲ್ಲಾ ಹಾಗೂ ಅಂತರ್ ರಾಜ್ಯ ಮಟ್ಟದ ಜಾಲವಾಗಿದ್ದು ಇತ್ತೀಚಿಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮದ ಅಬ್ಯನಡ್ಕದಲ್ಲಿರುವ ಪತ್ತೆಯಾದ ಪ್ರಕರಣಕ್ಕೂ ಈ ಪ್ರಕರಣಕ್ಕೂ ಸಂಬಂಧ ಇರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ.