Connect with us

DAKSHINA KANNADA

ಮಂಗಳೂರು : ‘ಡ್ರೀಮ್ ಡೀಲ್‌’ ನಲ್ಲಿ ನಡೆಯುತ್ತೆ ‘ಡೀಲ್.!!, ಇದು ಸ್ಕೀಮಾ ಅಥವಾ Scamaa!!?

ಮಂಗಳೂರು: ಭಾರಿ  ಜನಪ್ರೀಯತೆ ಪಡೆದಿದ್ದ  ‘ಡ್ರೀಮ್ ಗೋಲ್ಡ್’ (Dream Deal )ಗ್ರೂಪ್‌ನ ಲಕ್ಕಿ ಡ್ರಾ  ಇದೀಗ ಕರಾವಳಿಯ ಗ್ರಾಹಕರಲ್ಲಿ ತಲ್ಲಣ ಮೂಡಿಸಿದೆ.  ”ಅಧೃಷ್ಠ ಚೀಟಿಯ ಕೈ ಕಸರತ್ತು” ಡ್ರೀಮ್ ಡೀಲ್ ಗ್ರೂಪ್ ನಿಂದ ಇಂತಹದೊಂದು ಮೋಸ ನಡೆಯುತ್ತಿದೆ ಅಂದ್ರೆ ನೀವು ನಂಬುತ್ತೀರಾ ..?

ಇತ್ತೀಚೆಗೆ ನಡೆದ ಡ್ರೀಮ್ ಗೋಲ್ಡ್‌ ನ ಲೈವ್ ಡ್ರಾವೊಂದರಲ್ಲಿ ಸಿಬ್ಬಂದಿಯೊಬ್ಬ ಪ್ಯಾಂಟ್‌ನಿಂದ ತೆಗೆದಿರಿಸಿದ್ದ ಕಾಯಿನ್ ನೀಡುವ ಮೂಲಕ ಡ್ರಾ ದಲ್ಲಿ ಅದೇ ಸಂಖ್ಯೆ ಬರುವಂತೆ ಮಾಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ ಜೊತೆಗೆ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಈ ಕುರಿತಂತೆ ಜಾಲತಾಣದಲ್ಲಿ ವ್ಯಾಪಕ ಅಪಪ್ರಚಾರ ಕೇಳಿ ಬರುತ್ತಿದ್ದು ಡ್ರೀಮ್ ಡೀಲ್  ಮುಖ್ಯಸ್ಥರೇ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಬೇಕಿದೆ.

ಪ್ಯಾಂಟಿನ  ಕಿಸೆಯಿಂದ ಕಾಯಿನ್ ತೆಗೆದು ಕಾಯಿನ್ ತೆಗೆಯುವವನ ಕೈ ಹಿಡಿದು ತೆಗೆಯೋ ಮಾಯಾ ಜಾಲ. ಇದು ಒಂದು ಸ್ಕಿಮಾ ಅಥವಾ scamಅ ಅಂತ  ಕರಾವಳಿಯ ಪ್ರಜ್ಞಾವಂತ ನಾಗರಿಕರು ಕೇಳುತ್ತಿದ್ದಾರೆ. ಲಕ್ಕಿ ಸ್ಕೀಂಗಳು ಇತ್ತೀಚಿನ ದಿನಗಳಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಿರುವ ಸಮಯದಲ್ಲೇ ಇಂತಹ ಬೆಳವಣಿಗೆ ನಡೆದಿದ್ದು ಗ್ರಾಹಕರು ಡ್ರೀಮ್ ಡೀಲ್ ಗ್ರೂಪ್ ಬಂಪರ್ ಡ್ರಾ ಕುರಿತು ವಿಶ್ವಾಸ ಕಳೆದುಕೊಳ್ಳುವಂತಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *