LATEST NEWS
ಪ್ರಿಯಾ ಪ್ರಕಾಶ್ ವಾರಿಯರ್ ಗೆ ಫಿದಾ ಆದ ಮಂಗಳೂರು ಕಾರ್ಪೋರೇಟರ್

ಪ್ರಿಯಾ ಪ್ರಕಾಶ್ ವಾರಿಯರ್ ಗೆ ಫಿದಾ ಆದ ಮಂಗಳೂರು ಕಾರ್ಪೋರೇಟರ್
ಮಂಗಳೂರು ಫೆಬ್ರವರಿ 15: ಮಂಗಳೂರು ಮಹಾನಗರಪಾಲಿಕೆಯಲ್ಲಿ ಇಂದು ಅಚ್ಚರಿಯ ಘಟನೆಯೊಂದು ನಡೆದಿದೆ. ಪಾಲಿಕೆಯಲ್ಲಿ ಆಯೋಜಿಸಲಾಗಿದ್ದು ಎಡಿಬಿ ನೆರವಿನೊಂದಿಗೆ ಪಾಲಿಕೆ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆಯ ಸಾಧಕ ಭಾದಕಗಳ ಕುರಿತು ಸಭೆ ಆಯೋಜಿಸಲಾಗಿತ್ತು.
ಸಭೆಯಲ್ಲಿ ಉಪಸ್ಥಿತರಿದ್ದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಎಬಿಡಿ ಯೋಜನೆಯ ಅವ್ಯವಹಾರದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯಿದ್ದಿನ್ ಬಾವಾ ಶಾಮೀಲಾಗಿದ್ದಾರೆ ಎಂದು ಬಹಿರಂಗವಾಗಿ ಆರೋಪಿಸಿದರು. ಈ ಹಿನ್ನಲೆಯಲ್ಲಿ ಸಭೆಯಲ್ಲಿ ಕೋಲಾಹಲವೇ ನಡೆಯಿತು.

ಆದರೆ ಇಷ್ಟೆಲ್ಲಾ ವಾಗ್ವಾದ ಕಿರುಚಾಟ ನಡೆಯುತ್ತಿದ್ದರೂ ಮಂಗಳೂರು ಮಹಾನಗರಪಾಲಿಕೆಯ ಕಾರ್ಪೋರೆಟರ್ ಕಾಂಗ್ರೇಸ್ ನ ನವೀನ್ ಡಿಸೋಜಾ ಮಾತ್ರ ಪ್ರಿಯಾ ಪ್ರಕಾಶ್ ವಾರಿಯರ್ ಅವರ ಕಣ್ಣೊಟಕ್ಕೆ ಫಿದಾ ಆಗಿದ್ದರು.
ಪಾಲಿಕೆಯ ಸಭೆಯಲ್ಲಿ ಅಷ್ಟೆಲ್ಲಾ ರಾದ್ದಾಂತ ನಡೆದರೂ ನವೀನ್ ಡಿಸೋಜಾ ಮಾತ್ರ ಪ್ರಿಯಾ ಪ್ರಕಾಶ್ ಕಣ್ಣಿನ ಆಟಕ್ಕೆ ಮರಳಾಗಿ ಮೊಬೈಲ್ ನಲ್ಲಿ ಆಕೆಯ ವಿಡಿಯೋ ವಿಕ್ಷಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಿಯಾ ಪ್ರಕಾಶ್ ವಾರಿಯರ್ ಕಣ್ಣೋಟಕ್ಕೆ ಇಡೀ ದೇಶವೇ ಫಿದಾ ಆಗಿದೆ. ಇನ್ನು ನವೀನ್ ಯಾವ ಲೆಕ್ಕ. ಆಕೆಯ ಕಣ್ಸನ್ನೆಯ ಮಾಟಕ್ಕೆ ಸೋತ ನವೀನ್ ಪಾಲಿಕೆಯಲ್ಲಿ ನಡೆಯುತ್ತಿದ್ದ ಬಿಸಿಬಿಸಿ ಚರ್ಚೆಯ ಕಡೆ ತಿರುಗಿಯೂ ನೋಡದೆ ಕೇವಲ ಪ್ರಿಯಾ ಪ್ರಕಾಶ್ ವಾರಿಯರ್ ಕ್ಯೂಟ್ ನೋಟಕ್ಕೆ ಫಿದಾ ಆಗಿದ್ದರು. ಅದಕ್ಕೆ ಹೇಳೋದು ನ್ಯಾಷನಲ್ ಕ್ರಷ್ ಅಂತ.