DAKSHINA KANNADA
ಮಂಗಳೂರು – ಬೆಂಗಳೂರು ರೈಲ್ವೆ ಹಳಿ ಕೆಳಭಾಗದಲ್ಲೆ ಕುಸಿದ ಭೂಮಿ – ರೈಲುಗಳ ಸಂಚಾರದಲ್ಲಿ ವ್ಯತ್ಯಯ
ಪುತ್ತೂರು ಜುಲೈ 27: ಶಿರಾಢಿಘಾಟ್ ನ ಎಡಕುಮೇರಿ ಬಳಿ ರೈಲ್ವೆ ಹಳಿಯಲ್ಲಿ ಭೂಕುಸಿತ ಉಂಟಾಗಿದ್ದು, ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಈಗಾಗಲೇ ಹಲವು ರೈಲುಗಳು ಬದಲಿ ಮಾರ್ಗದಲ್ಲಿ ಸಂಚರಿಸುತ್ತಿದ್ದು, ದುರಸ್ಥಿ ಕಾರ್ಯ ಭರದಿಂದ ಸಾಗಿದ್ದು, ಭೂಕುಸಿತ ಉಂಟಾದ ಕಾರಣ ರೈಲ್ವೆ ಸಂಚಾರ ಬಂದ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸುಬ್ರಹ್ಮಣ್ಯ ರೈಲು ನಿಲ್ದಾಣದಿಂದ ಸುಮಾರು 20 ಕಿ.ಮಿ ದೂರದಲ್ಲಿ ಘಟನೆ, ರೈಲ್ವೆ ಹಳಿಯ ಕೆಳಭಾಗದಲ್ಲಿ ಭೂಕುಸಿತ ಉಂಟಾಗಿದೆ. ಅಲ್ಲದೆ ರೈಲ್ವೆ ಹಳಿಗೆ ನಿರ್ಮಿಸಿದ್ದ ತಡೆಗೊಡೆಗೂ ಹಾನಿಯಾಗಿದೆ. ತುರ್ತು ಕಾಮಗಾರಿಗಾಗಿ ಸುಬ್ರಹ್ಮಣ್ಯ ರೈಲು ನಿಲ್ದಾಣದ ಮೂಲಕ ಕಾರ್ಮಿಕರ ರವಾನೆ ಮಾಡಲಾಗಿದೆ.
ವಿಪರೀತ ಮಳೆಯಾಗುತ್ತಿರುವ ಕಾರಣ ದುರಸ್ಥಿ ಕಾಮಗಾರಿಗೆ ಅಡಚಣೆಯಾಗಿದೆ . ಹಳಿಯ ಕಳೆ ಭಾಗದಿಂದ ಕುಸಿತ ಉಂಟಾದ ಪರಿಣಾಮ ಎಲ್ಲಾ ರೈಲುಗಳ ಸಂಚಾರಕ್ಕೆ ತಡೆಯಾಗುವ ಸಾಧ್ಯತೆ ಇದ್ದು. ಕೆಲವು ರೈಲುಗಳು ಬದಲಿ ಮಾರ್ಗಗಳ ಮೂಲಕ ಸಂಚರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.
ಶಿರಾಡಿ ಮತ್ತು ಹಾಸನದಲ್ಲಿ ಗುಡ್ಡಜರಿದು ರೈಲು ಹಳಿಗೆ ಹಾನಿ ಹಿನ್ನೆಲೆಯಲ್ಲಿ ಶನಿವಾರ (ಇಂದು) ಮಂಗಳೂರು -ವಿಜಯಪುರ, ಬೆಂಗಳೂರು- ಮುರುಡೇಶ್ವರ, ಮಂಗಳೂರು ಜಂಕ್ಷನ್- ಯಶವಂತಪುರ ಎಕ್ಸ್ಪ್ರೆಸ್ ರೈಲುಗಳ “ಹಾಸನ ಮೂಲಕ ಸಂಚಾರ ರದ್ದುಗೊಳಿಸಲಾಗಿದೆ” ಎಂದು ರೇಲ್ವೇ ಪ್ರಕಟಣೆ ತಿಳಿಸಿದೆ.