LATEST NEWS
ಮಂಗಳೂರು -ಆಟೋ ಬಣ್ಣ ಬದಲು
ಮಂಗಳೂರು ಡಿಸೆಂಬರ್ 2: ಮಂಗಳೂರಿನ ವಲಯ-1ರ ನಗರ ಮತ್ತು ವಲಯ-2ರ ಗ್ರಾಮಾಂತರ ಪ್ರದೇಶದ ಎಲೆಕ್ಟಿಕ್ ಆಟೋಗಳು, ಮೆಥನಾಲ್ ಮತ್ತು ಇಥನಾಲ್ ಇಂಧನ ಬಳಸಿ ಸಂಚರಿಸುವ ಒಳಗೊಂಡಂತೆ ಎಲ್ಲ ವಿಧದ ಆಟೋ ರಿಕ್ಷಾಗಳು ಬಣ್ಣ ಬದಲಾವಣೆ ಮಾಡಿಕೊಳ್ಳುವಂತೆ ಮಂಗಳೂರಿನ ಪ್ರಭಾರ ಉಪ ಸಾರಿಗೆ ಆಯುಕ್ತರು ಸೂಚನೆ ನೀಡಿದ್ದಾರೆ.
ವಲಯ-1ರ ಆಟೋರಿಕ್ಷಾಗಳು ರಿಕ್ಷಾದ ಮಧ್ಯಭಾಗದಿಂದ ಕೆಳಗಡೆ ಕಪ್ಪು ಬಣ್ಣವನ್ನು ಪೂರ್ತಿಯಾಗಿ ಬಳಿಯಬೇಕು. ಆಟೋ ವಲಯ-2ರ ಆಟೋರಿಕಾಗಳ ಮಧ್ಯಭಾಗದಿಂದ ಮೇಲೆ ಹಳದಿ ಬಣ್ಣ ಬಳಿಯಬೇಕು. ವಲಯ-1ಕ್ಕೆ ಚೌಕಾಕೃತಿ ಆಕಾರದ ನೀಲಿ ಬಣ್ಣದ ಸ್ಟಿಕರ್ / ಗುರುತಿನ ಸಂಖ್ಯೆಯನ್ನು ಪೊಲೀಸ್ ಇಲಾಖೆಯಿಂದ ಪಡೆದುಕೊಂಡು ಅಂಟಿಸಬೇಕು. ಮಧ್ಯಭಾಗದಿಂದ ಕೆಳಗಡೆ ಕಪ್ಪು ಬಣ್ಣವನ್ನು ಪೂರ್ತಿಯಾಗಿ ಬಳಿಯಬೇಕು. ರಿಕ್ಷಾದ ಮಧ್ಯಭಾಗದಿಂದ ಮೇಲೆ ಹಳದಿ ಬಣ್ಣವನ್ನು ಬಳಿಯಬೇಕು. ಅಲ್ಲದೆ, ವೃತ್ತಾಕಾರದ ಹಳದಿ ಬಣ್ಣದ ಗುರುತಿನ ಸಂಖ್ಯೆಯನ್ನು ಪೊಲೀಸ್ ಇಲಾಖೆಯಿಂದ ಪಡೆದುಕೊಂಡು ಅಂಟಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.