LATEST NEWS
ಅನರಕ್ಷರಸ್ಥನೊಬ್ಬ ಫೆಕ್ ವಾಯ್ಸ್ ಮೊಬೈಲ್ ಆ್ಯಪ್ ಬಳಸಿ ಕಾಲೇಜಿನ 7 ವಿಧ್ಯಾರ್ಥಿನಿಯರ ಮೇಲೆ ರೇಪ್
ಭೋಪಾಲ್ ಮೇ 26: ಅನರಕ್ಷರಸ್ಥನೊಬ್ಬ ವಾಯ್ಸ್ ಚೆಂಜ್ ಟೆಕ್ನಾಲಜಿಯನ್ನು ಬಳಸಿಕೊಂಡು ಧ್ವನಿ ಬದಲಾಯಿಸುವ ಮೊಬೈಲ್ ಆ್ಯಪ್ ಬಳಸಿ ಕಾಲೇಜಿನ 7 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಸಂಬಂಧ ಪೊಲೀಸರು ಒಟ್ಟು ಮೂವರನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತ ಆರೋಪಿಯನ್ನು ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಮಿಲ್ ಕಾರ್ಮಿಕ ಬ್ರಜೇಶ್ ಕುಶ್ವಾಹಾ ಎಂದು ಗುರುತಿಸಲಾಗಿದೆ. ಅನಕ್ಷರಸ್ಥನಾಗಿದ್ದು ಮಹಾರಾಷ್ಟ್ರದ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಕೈ ಸುಟ್ಟುಕೊಂಡಿದ್ದನು. ಬಳಿಕ ತನ್ನ ಊರಿಗೆ ವಾಪಸ್ ಆಗಿದ್ದನು. ನಂತರ ಧ್ವನಿ ಬದಲಾಯಿಸುವ ಮೊಬೈಲ್ ಆ್ಯಪ್ ಬಳಸಿ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಮಹಿಳಾ ಪ್ರೊಫೆಸರ್ನಂತೆ ಮಾತನಾಡಿ ಅವರನ್ನು ನಿಮ್ಮ ಮುಂದಿನ ಶಿಕ್ಷಣಕ್ಕೆ ಹಾಗೂ ಸ್ಕಾಲರ್ಶಿಪ್ಗೆ ಸಹಾಯ ಮಾಡುವುದಾಗಿ ಹೇಳುತ್ತಿದ್ದನು. ಬಳಿಕ ಒಮ್ಮೆ ನಿರ್ಜನ ಪ್ರದೇಶದಲ್ಲಿ ಭೇಟಿ ಆಗಲು ಹೇಳಿ, ಬೈಕ್ನಲ್ಲಿ ಬಂದು ಮನೆಗೆ ಕರೆದುಕೊಂಡು ಹೋಗುತ್ತಿದ್ದ. ನಂತರ ಅಲ್ಲಿಂದ ಅರಣ್ಯ ಪ್ರದೇಶಕ್ಕೆ ಜೊತೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗುತ್ತಿದ್ದನು. ಇದೇ ರೀತಿ 7 ಕಾಲೇಜುಗಳ 7 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದನು ಎಂದು ಹೇಳಲಾಗಿದೆ.
ಈ ಸಂಬಂಧ ಯುವತಿಯೊಬ್ಬರು ನನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿ ಕಾಲೇಜು ಬಳಿ ತಲೆಗೆ ಹೆಲ್ಮೆಟ್ ಧರಿಸಿ ಬರುತ್ತಿದ್ದರಿಂದ ಪತ್ತೆ ಹಚ್ಚಲು ಪೊಲೀಸರಿಗೆ ಕಷ್ಟವಾಗಿತ್ತು. ಆದರೆ ಎಲ್ಲ ಯುವತಿಯರ ಭೇಟಿ ಮಾಡಲು ಬಂದಾಗ ತನ್ನ ಕೈಗೆ ಆಗಿದ್ದ ಸುಟ್ಟ ಗಾಯ ಕಾಣಿಸಬಾರದೆಂದು ಹಾಕಿಕೊಳ್ಳುತ್ತಿದ್ದ ಗ್ಲೌಸ್ಗಳೇ ಆರೋಪಿಯನ್ನ ಹಿಡಿಯಲು ಪ್ರಮುಖ ಸುಳಿವು ನೀಡಿವೆ. ಸದ್ಯ ಆರೋಪಿಯ ಮನೆಯನ್ನು ಸರ್ಕಾರ ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದೆ. ಈ ಬಗ್ಗೆ ಇನ್ನು ಹೆಚ್ಚಿನ ತನಿಖೆ ನಡೆಸಿ ಎಂದು ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.