Connect with us

LATEST NEWS

ಉಡುಪಿ – ನಾಯಿಯ ಶವವನ್ನು ಸ್ಕೂಟರ್ ಗೆ ಕಟ್ಟಿ ಎಳೆದುಕೊಂಡ ಹೊದ ವ್ಯಕ್ತಿ

ಕಾರ್ಕಳ ಜುಲೈ 20: ವ್ಯಕ್ತಿಯೊಬ್ಬ ಸತ್ತ ನಾಯಿಯನ್ನು ಸ್ಕೂಟರ್ ಗೆ ಕಟ್ಟಿಕೊಂಡು ಎಳೆದೊಯ್ದ ಘಟನೆ ಶಿರ್ವ ಮುಖ್ಯ ರಸ್ತೆಯಲ್ಲಿ ನಡೆದಿದ್ದು, ಇದೀಗ ಘಟನೆಯ ವಿಡಿಯೋ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಈ ಅಮಾನವೀಯ ಕೃತ್ಯ ನಡೆಸಿದ ವ್ಯಕ್ತಿ ಕೊಂಬಗುಡ್ಡೆಯ ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದೆ.

ಕೊಂಬಗುಡ್ಡೆಯ ನಿವಾಸಿ ಖಾದ‌ರ್, ಮೃತಪಟ್ಟ ನಾಯಿಯ ಕೊರಳಿಗೆ ಸರಪಳಿ ಹಾಕಿ, ಸ್ಕೂಟರ್‌ನ ಸೀಟಿಗೆ ಸರಪಳಿ ​​ಕಟ್ಟಿಕೊಂಡು ಕೊಂಬಗುಡ್ಡೆಯಿಂದ ಶಿರ್ವ ಪೇಟೆಯವರೆಗೆ ಎಳೆದೊಯ್ದು ವಿಕೃತಿ ಮೆರೆದಿದ್ದಾನೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಶಿರ್ವ ಪೊಲೀಸರು ಆರೋಪಿ ಖಾದ‌ರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *