LATEST NEWS
ರಸ್ತೆಯಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಗೆ ಧರ್ಮದೇಟು ನೀಡಿದ ಸ್ಥಳೀಯರು

ರಸ್ತೆಯಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಗೆ ಧರ್ಮದೇಟು ನೀಡಿದ ಸ್ಥಳೀಯರು
ಕುಂದಾಪುರ ಅಗಸ್ಟ್ 8: ರಸ್ತೆಯಲ್ಲಿ ಸಂಚಾರ ಮಾಡುವ ಹುಡುಗಿಯರ ಮುಂದೆ ಅಶ್ಲೀಲವಾಗಿ ವರ್ತಿಸುತ್ತಿದ್ದ ಯುವಕನಿಗೆ ಸ್ಥಳೀಯರು ಕಟ್ಟಿಹಾಕಿ ಧರ್ಮದೇಟು ನೀಡಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.
ಕುಂದಾಪುರದ ಖ್ಯಾತ ಮಾಂಸಹಾರಿ ಹೋಟೆಲ್ ವೊಂದರ ಮಾಲಿಕನ ಪುತ್ರನೆ ಈ ಕೃತ್ಯ ಎಸಗಿದ್ದ ಆರೋಪಿಯಾಗಿದ್ದು, ಸ್ಥಳೀಯರು ಸರಿಯಾಗಿ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿ ಯುವಕ ಕಳೆದ ಕೆಲವು ಸಮಯಗಳಿಂದ ಕುಂದಾಪುರದ ವಿವಿಧ ರಸ್ತೆಗಳಲ್ಲಿ ಹೆಣ್ಣು ಮಕ್ಕಳು ನಡೆದು ಹೋಗುತ್ತಿದ್ದಾಗ ಪ್ಯಾಂಟ್ ಬಿಚ್ಚಿ ಅಶ್ಲೀಲವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಸೋಮವಾರವೂ ಆರೋಪಿ ಇದೇ ರೀತಿ ವರ್ತಿಸಿದ್ದಾನೆ ಎಂದು ಹೇಳಲಾಗಿದ್ದು, ಕೆಲವು ಯುವತಿಯರು ಮನೆಯಲ್ಲಿ ಹೋಗಿ ವಿಷಯ ತಿಳಿಸಿದ್ದರು ಎನ್ನಲಾಗಿದೆ.
ಮಂಗಳವಾರು ಸಂಜೆ ಆರೋಪಿ ತನ್ನ ದ್ವಿಚಕ್ರ ವಾಹನದಲ್ಲಿ ಕುಂದಾಪುರ ಪುರಸಭಾ ವ್ಯಾಪ್ತಿಯ ಎಲ್‌ಐಸಿ ರಸ್ತೆಯಲ್ಲಿ ಬರುತ್ತಿರುವ ಸಂದರ್ಭ ಸ್ಥಳೀಯ ಮಹಿಳೆಯರು ಆರೋಪಿಯನ್ನು ಅಡ್ಡಗಟ್ಟಿ ಆತನನ್ನು ಪ್ಲಾಸ್ಟಿಕ್ ವಯರಿನಲ್ಲಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹೊಡೆದಿದ್ದಾರೆ.
ನಂತರ ವಿಷಯ ತಿಳಿದ ಕುಂದಾಪುರ ಪೊಲೀಸರು ಸ್ಥಳಕ್ಕಾಗಮಿಸಿ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಆರೋಪಿ ಮನೆಯವರು ಸುದ್ಧಿ ತಿಳಿದು ಠಾಣೆಗೆ ಬಂದಿದ್ದು, ಆರೋಪಿ ಯುವಕ ಮಾನಸಿಕ ಅಸ್ವಸ್ಥ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೇ ಆತನಿಗೆ ವಿವಾಹವಾಗಿದ್ದು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.