LATEST NEWS
ನಡು ರಸ್ತೆಯಲ್ಲಿ ಕತ್ತಿಯಲ್ಲಿ ತನ್ನನ್ನು ತಾನೆ ಕಡಿದುಕೊಂಡ ಮಾನಸಿಕ ಅಸ್ವಸ್ಥ

ನಡು ರಸ್ತೆಯಲ್ಲಿ ಕತ್ತಿಯಲ್ಲಿ ತನ್ನನ್ನು ತಾನೆ ಕಡಿದುಕೊಂಡ ಮಾನಸಿಕ ಅಸ್ವಸ್ಥ
ಉಡುಪಿ ಮಾರ್ಚ್ 10: ತನ್ನನ್ನು ತಾನೆ ಕಡಿದುಕೊಂಡು ಕುಂದಾಪುರದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಆತಂಕ ಸೃಷ್ಠಿಸಿದ ಘಟನೆ ನಡೆದಿದೆ.
ಕುಂದಾಪುರದ ರಾಮಮಂದಿರದ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕೊಪ್ಪಳ ಮೂಲದ ಸುಮಾರು 40 ವರ್ಷ ಪ್ರಾಯದ ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದ್ದು, ಕತ್ತಿಯಿಂದ ಕುತ್ತಿಗೆ ಭಾಗಕ್ಕೆಮತ್ತು ಮರ್ಮಾಂಗವನ್ನು ಕಡಿದುಕೊಂಡಿದ್ದು, ರಾಮಮಂದಿರ ರಸ್ತೆಯಲ್ಲಿ ಕೆಲಕಾಲ ಆತಂಕ ಸೃಷ್ಠಿಯಾಗಿತ್ತು.
ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಲಸಿದ ಪೊಲೀಸ್ ಸಿಬ್ಬಂದಿಗಳು ವ್ಯಕ್ತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವ್ಯಕ್ತಿಯ ಗುರುತು ಮತ್ತೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿಯಬೇಕಿದೆ
