LATEST NEWS
ರೈಲ್ವೆ ಟ್ರ್ಯಾಕ್ ಮೇಲೆ ಕೊಡೆ ಹಿಡಿದುಕೊಂಡು ನೆಮ್ಮದಿಯ ನಿದ್ರೆ – ಲೋಕೋಪೈಲೆಟ್ ಗೆ ಶಾಕ್

ಪ್ರಯಾಗರಾಜ್ ಅಗಸ್ಟ್ 26: ವ್ಯಕ್ತಿಯೊಬ್ಬ ರೈಲ್ವೆ ಟ್ರ್ಯಾಕ್ ಮೇಲೆ ಕೊಡೆ ಹಿಡಿದುಕೊಂಡು ನೆಮ್ಮದಿಯಾಗಿ ನಿದ್ರೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ರೈಲು ಹಳಿಯಲ್ಲಿ ವ್ಯಕ್ತಿಯೊಬ್ಬ ಕೊಡೆ ಹಿಡಿದು ಮಲಗಿದ್ದಾನೆ. ಇದನ್ನು ನೋಡಿದ ರೈಲಿನ ಲೋಕೋಪೈಲೆಟ್ ರೈಲನ್ನು ದೂರದಲ್ಲೇ ನಿಲ್ಲಿಸಿದ್ದಾನೆ. ಇದರಿಂದಾಗಿ ವ್ಯಕ್ತಿಯ ಜೀವ ಉಳಿಸಿದೆ. ರೈಲು ಬಂದು ನಿಂತಿದ್ದರೂ ವ್ಯಕ್ತಿ ಮಾತ್ರ ಆರಾಮಾಗಿ ನಿದ್ರೆ ಮಾಡುತ್ತಿರುವುದು ವಿಡಿಯೋದಲ್ಲಿ ಕಾಣ ಸಿಕ್ಕಿದೆ. ರೈಲ್ವೆ ಸಿಬ್ಬಂದಿ ಬಂದು ವ್ಯಕ್ತಿಯನ್ನು ಎಬ್ಬಿಸಿದ್ದಾರೆ. ಆತ ನಿದ್ರೆಯಿಂದ ಎದ್ದು ಏನು ಆಗದ ಹಾಗೆ ನಡೆದುಕೊಂಡು ಹೋಗಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಹಲವಾರು ಜನರು ಕಮೆಂಟ್ ಮಾಡಿದ್ದಾರೆ. “ಅಂತಹ ಅದ್ಭುತ ಜನರು” ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ, “ಇದು ಸಂಪೂರ್ಣವಾಗಿ ಗೊಂದಲಮಯವಾಗಿದೆ. ಕೊನೆ ಕ್ಷಣದಲ್ಲಿ ಅವನಿಗೆ ಛತ್ರಿ ಏಕೆ ಬೇಕಿತ್ತು?” ಇನ್ನೊಬ್ಬರು ಯಮರಾಜ ಲೋಕೋಪೈಲಟ್ ನನ್ನು ಕ್ಷಮಿಸುವುದಿಲ್ಲ ಎಂದಿದ್ದಾರೆ.