LATEST NEWS
ಯೂಟ್ಯೂಬ್ ವೀವ್ಸ್ ಗಾಗಿ ರೈಲಿನಲ್ಲಿ ಕುಳಿತಿದ್ದ ಪ್ರಯಾಣಿಕನ ಕೆನ್ನೆಗೆ ಬಾರಿಸಿದವನಿಗೆ ಆರ್‌ಪಿಎಫ್ ಮಾಡಿದ್ದೇನು

ನವದೆಹಲಿ ಮಾರ್ಚ್ 01: . ಯೂಟ್ಯೂಬ ನಲ್ಲಿ ವೀವ್ಸ್ ಮತ್ತು ಪಾಲೋವರ್ಸ್ ಹೆಚ್ಚು ಮಾಡಿಕೊಳ್ಳುವ ಸಲುವಾಗಿ ಯೂಟ್ಯೂಬರ್ ಒಬ್ಬ ರೈಲಿನಲ್ಲಿ ಕುಳಿತಿದ್ದ ಪ್ರಯಾಣಿಕ ಕೆನ್ನೆಗೆ ಭಾರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇದೀಗ ರೈಲ್ವೆ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿ ಅವನ ಕೆನ್ನೆಗೆ ಬಾರಿಸಿದ್ದಾರೆ.
ಬಿಹಾರದ ಅನುಗ್ರಹ ನಾರಾಯಣ ರಸ್ತೆಯ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಯೂಟ್ಯೂಬರ್ ರೈಲು ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಚಲಿಸುತ್ತಿರುವ ರೈಲಿನ ಸಮೀಪ ಹೋಗುವ ಯೂಟ್ಯೂಬರ್, ಕಿಟಕಿ ಪಕ್ಕದಲ್ಲಿ ಕುಳಿತಿರುವ ಪ್ರಯಾಣಿಕರೊಬ್ಬರಿಗೆ ಏಕಾಏಕಿ ಕಪಾಳಮೋಕ್ಷ ಮಾಡಿದ್ದಾನೆ. ಬಳಿಕ ಏನೂ ಆಗಿಲ್ಲ ಎಂಬಂತೆ ಜೋರಾಗಿ ಕೂಗಾಡುತ್ತ ಹೋಗಿದ್ದಾನೆ. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ಈ ವಿಡಿಯೊ ಆಧರಿಸಿ ಆರೋಪಿ ಯೂಟ್ಯೂಬರ್ ರಿತೇಶ್ ಕುಮಾರ್‌ನನ್ನು ಬಂಧಿಸಲಾಗಿದೆ ಎಂದು ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ‘ಎಕ್ಸ್’ನಲ್ಲಿ ಮಾಹಿತಿ ನೀಡಿದೆ. ಜತೆಗೆ, ಘಟನೆ ಬಗ್ಗೆ ಯೂಟ್ಯೂಬರ್‌ನಿಂದ ಕ್ಷಮೆಯಾಚಿಸಿರುವ ವಿಡಿಯೊವನ್ನು ಪೋಸ್ಟ್ ಮಾಡಿದೆ. ‘ನಾನು ಯೂಟ್ಯೂಬರ್, ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳಲು ವಿಡಿಯೊಗಳನ್ನು ಇನ್ ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತೇನೆ. ಹಾಗೆಯೇ ಈಚೆಗೆ ಅನುಗ್ರಹ ನಾರಾಯಣ ರಸ್ತೆಯ ರೈಲು ನಿಲ್ದಾಣಕ್ಕೆ ಹೋಗಿದ್ದ ವೇಳೆ ರೈಲು ಪ್ರಯಾಣಿಕರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದೆ. ಇದು ನನ್ನ ತಪ್ಪು, ಈ ರೀತಿ ತಪ್ಪನ್ನು ಮತ್ತೆ ಮಾಡುವುದಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದು ರಿತೇಶ್ ಕುಮಾರ್ ಕೇಳಿಕೊಂಡಿದ್ದಾನೆ.
1 Comment