DAKSHINA KANNADA
ಪುತ್ತೂರು – ಸಾರ್ವಜನಿಕರಿಗೆ ತಲವಾರ್ ತೋರಿಸುತ್ತಾ ಬೆದರಿಕೆ ಒಡ್ಡಿದ ಆರೋಪಿ ಪೊಲೀಸ್ ವಶಕ್ಕೆ

ಪುತ್ತೂರು ಜುಲೈ 15: ತಲವಾರ್ ಹಿಡಿದು ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತನನ್ನು ಆರೋಪದಲ್ಲಿ ಹಾಸನ ಮೂಲದ, ಪ್ರಸ್ತುತ ಬಂಟ್ವಾಳದಲ್ಲಿ ವಾಸವಾಗಿರುವ ರಾಜು (45) ಎಂದು ಗುರುತಿಸಲಾಗಿದೆ. ಆರೋಪಿ ಬೊಳುವಾರಿನಲ್ಲಿ ತಲವಾರನ್ನು ಶರ್ಟ್ ಹಿಂಬದಿಗೆ ಸಿಕ್ಕಿಸಿ ಪ್ರದರ್ಶನ ಮಾಡುತ್ತಿದ್ದಾಗ ಅದು ನೆಲಕ್ಕೆ ಬಿದ್ದಿದೆ. ಮಾರಕಾಸ್ತ್ರವನ್ನು ಕಂಡ ಸಾರ್ವಜನಿಕರು ಅಪಾಯದ ಭೀತಿಯಿಂದ ಆತನನ್ನು ಸುತ್ತುವರಿದು ಹಿಡಿದುಕೊಂಡರು. ಪೊಲೀಸರು ರಾಜೇಶ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಲವಾರನ್ನು ಹರಿತಗೊಳಿಸಲೆಂದು ಕಮ್ಮಾರನ ಬಳಿಗೆ ತೆಗೆದುಕೊಂಡು ಹೋಗುತ್ತಿದ್ದೆ ಎಂದಿದ್ದಾನೆ ಎನ್ನಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Pingback: ಉಪನ್ಯಾಸಕರಿಂದಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಮೂಡುಬಿದಿರೆ ಕಾಲೇಜಿನ ಇಬ್ಬರು ಉಪನ್ಯಾಸಕರು, ಸ್ನೇಹಿತ ಅರೆ