ಬೆಳ್ತಂಗಡಿ ಶಾಸಕರ ಬೆಂಬಲಿಗನ ಮೇಲೆ ಯುವತಿಗೆ ಕಿರುಕುಳ ಆರೋಪ, ಶಾಸಕನ ಎಳೆ ತರಲು ನೀಡಲಾಗುತ್ತಿದೆ ಹೊಸ ರೂಪ

ಬೆಳ್ತಂಗಡಿ ನವೆಂಬರ್ 19: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ನಿಕಟವರ್ತಿ ಎಂದು ಗುರುತಿಸಲಾಗಿರುವ ವ್ಯಕ್ತಿಯೋರ್ವ ಕಾಲೇಜು ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪದ ಚಿತ್ರಗಳು ಸಾಮಾಜಿಕ. ಜಾಲತಾಣದಲ್ಲಿ ವೈರಲ್ ಆಗಲಾರಂಭಿಸಿದೆ.

ಚಿತ್ರದ ಜೊತೆಗೆ ಇನ್ನೋರ್ವ ವ್ಯಕ್ತಿ ಆರೋಪಿತನಿಗೆ ಫೋನ್ ನಲ್ಲೇ ತಪರಾಕಿ ಹಾಕುವ ಅಡಿಯೋ‌ ಕೂಡಾ ವೈರಲ್ ಆಗುತ್ತಿದೆ. ಆರೋಪಿತ ವ್ಯಕ್ತಿ ಶಾಸಕ ಹರೀಶ್ ಪೂಂಜಾ ಜೊತೆ ಫೋಟೋಗೆ ಫೋಸ್ ನೀಡಿದ್ದು, ಬೆಳ್ತಂಗಡಿ ಯಲ್ಲೇ ವಕೀಲ ವೃತ್ತಿ ನಡೆಸುತ್ತಿದ್ದಾರೆ ಎನ್ನುವುದು ಆಡಿಯೋದಲ್ಲಿರುವ ಸಂಭಾಷಣೆಯಿಂದ ವ್ಯಕ್ತವಾಗುತ್ತಿದೆ.

ಶಾಸಕರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾನೆ ಎನ್ನುವ ಕಾರಣಕ್ಕಾಗಿ ಇದೀಗ ಶಾಸಕ ಹರೀಶ್ ಪೂಂಜಾರೂ ಈ ಪ್ರಕರಣಕ್ಕೆ ಬೆಂಬಲವಾಗಿದ್ದಾರೆ ಎನ್ನುವುದನ್ನೂ ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸುವ ಪ್ರಯತ್ನವೂ ನಡೆಯುತ್ತಿದೆ.

ವಾಟ್ಸಾಪ್ ನಲ್ಲಿ ಪೂಂಜಾ ಜೊತೆ ಇರುವ ಈ‌ ವ್ಯಕ್ತಿ ಹುಡುಗಿಯಲ್ಲಿ ನಾವು ನಿನಗೆ ಇಷ್ಟ ಬಂದಲ್ಲಿ ಹೋಗುವ. ಬೆಂಗಳೂರು, ಮೈಸೂರು , ಮಂಗಳೂರು ಹೀಗೆ ಎಲ್ಲಾದರೂ ಆಗಬಹುದು‌ ಎನ್ನುವ ಸಂದೇಶವನ್ನು ರವಾನಿಸಿದ್ದಾನೆ.ಇದಕ್ಕೆ ಖಾರವಾಗಿಯೇ ಆ ಯುವತಿ ‌ಪ್ರತಿಕ್ರಿಯಿಸಿರುವುದೂ ಕಂಡು ಬರುತ್ತಿದೆ.

3 Shares

Facebook Comments

comments