LATEST NEWS
ಅಯೋಧ್ಯೆ – ಫಸ್ಟ್ ನೈಟ್ ರೂಮ್ ಗೆ ತೆರಳಿದ್ದ ನವವಧುವರರು ಬೆಳಿಗ್ಗೆ ಶವವಾಗಿ ಪತ್ತೆ

ಅಯೋಧ್ಯೆ ಮಾರ್ಚ್ 10: ಮದುವೆ ಕಾರ್ಯಕ್ರಮ ಮುಗಿಸಿ ರಾತ್ರಿ ರೂಮ್ ಗೆ ತೆರಳಿದ್ದ ನವವಧುವರರು ಬೆಳಿಗ್ಗೆ ಶವವಾಗಿ ಪತ್ತೆಯಾದ ಘಟನೆ ಅಯೋಧ್ಯೆ ಕಂಟೋನ್ಮೆಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಸಾದತ್ ಗಂಜ್ ಪ್ರದೇಶದಲ್ಲಿ ನಡೆದಿದೆ.
ಅಯೋಧ್ಯೆ ಕಂಟೋನ್ಮೆಂಟ್ ಪೋಲಿಸ್ ಠಾಣಾ ವ್ಯಾಪ್ತಿಯ ಸಾದತ್ ಗಂಜ್ ಪ್ರದೇಶದ ನಿವಾಸಿ ಪ್ರದೀಪ್ ಶನಿವಾರ ಶಿವಾನಿಯನ್ನು ಮದುವೆಯಾಗಿದ್ದರು. ಮದುವೆಯ ಬಳಿಕ ಅಪರಾಹ್ನ ದಿಬ್ಬಣವು ವರನ ಮನೆಗೆ ಮರಳಿದ್ದು,ದಿನವಿಡೀ ವಿವಾಹಾನಂತರದ ವಿಧಿಗಳು ನಡೆದಿದ್ದವು. ರಾತ್ರಿ ವಧು ಮತ್ತು ವರ ಮಲಗಲು ತಮ್ಮ ಕೋಣೆಗೆ ತೆರಳಿದ್ದರು.

ರವಿವಾರ ಬೆಳಿಗ್ಗೆ ದಂಪತಿ ಕೋಣೆಯಿಂದ ಹೊರ ಬರದ ಕಾರಣ ಕುಟುಂಬಸ್ಥರು ಕೊಣೆಯ ಬಾಗಿಲು ಬಡಿದಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬರದ ಕಾರಣ ಬಾಗಿಲು ಒಡೆದು ಒಳಗೆ ನೋಡಿದಾಗ ಶಿವಾನಿಯ ಮೃತದೇಹವು ಹಾಸಿಗೆಯಲ್ಲಿ ಕಂಡು ಬಂದಿತ್ತು ಮತ್ತು ಪ್ರದೀಪ್ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಪತ್ತೆಯಾಗಿತ್ತು, ಕೊಠಡಿ ಒಳಗಿನಿಂದ ಲಾಕ್ ಆಗಿರುವುದರಿಂದ ವರನು ವಧುವನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬರುತ್ತದೆ ಎಂದು ಅಧಿಕಾರಿ ಹೇಳಿದರು.