LATEST NEWS
ಸ್ನಾನದ ಬಳಿಕ ಟವಲ್ ನೀಡಲು ತಡ ಮಾಡಿದಕ್ಕೆ ಪತ್ನಿಯನ್ನೆ ಕೊಂದ ಪತಿರಾಯ!

ಭೂಪಾಲ್: ಗಂಡ ಹೆಂಡತಿ ಜಗಳ ಉಂಡು ಮಲಗುವರೆಗೆ ಎನ್ನುತ್ತಾರೆ ಆದರೆ ಸಣ್ಣದಾಗಿ ನಡೆಯುವ ಗಲಾಟೆಗಳು ಕೊಲೆ ಮಾಡುವ ಮಟ್ಟಕ್ಕೆ ಹೋಗುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದ್ದು, ಸ್ನಾನಕ್ಕೆ ಹೋದ ಗಂಡನಿಗೆ ಆತನ ಹೆಂಡತಿ ಟವೆಲ್ ಕೊಡುವುದು ತಡವಾಯಿತು ಎಂಬ ಕಾರಣಕ್ಕೆ ಆತ ತನ್ನ ಹೆಂಡತಿಯನ್ನು ಕೊಲೆ ಮಾಡಿದ್ದಾನೆ.
ಮಧ್ಯಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅರಣ್ಯ ಇಲಾಖೆಯ ದಿನಗೂಲಿ ನೌಕರ ರಾಜಕುಮಾರ್ ಬಹೆ (50) ತನ್ನ ಪತ್ನಿ ಪುಷ್ಪಾ ಬಾಯಿ (45)ಯನ್ನು ಕೊಲೆ ಮಾಡಿದ್ದಾನೆ. ಆತ ಸ್ನಾನದ ನಂತರ ಟವೆಲ್ ನೀಡುವಂತೆ ಕೇಳಿದ್ದ. ಆದರೆ, ಆಕೆ ಟವೆಲ್ ನೀಡಲು ತಡವಾಗಿದ್ದಕ್ಕೆ ಈ ಕೊಲೆ ಮಾಡಿದ್ದಾನೆ ಎಂದು ಎಂದು ಕಿರ್ನಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಜೇಂದ್ರ ಕುಮಾರ್ ಬರಿಯಾ ತಿಳಿಸಿದ್ದಾರೆ.

ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದುದರಿಂದ ಸ್ವಲ್ಪ ಸಮಯ ಕಾಯುವಂತೆ ಅವನ ಹೆಂಡತಿ ಹೇಳಿದ್ದಳು. ಇದರಿಂದ ಕೋಪಗೊಂಡ ವ್ಯಕ್ತಿ ಸ್ನಾನ ಮುಗಿಸಿ ಹೊರಗೆ ಬಂದ ನಂತರ ಕಬ್ಬಿಣದ ರಾಡಿನಿಂದ ಪತ್ನಿಯ ತಲೆಗೆ ಪದೇ ಪದೇ ಹೊಡೆದಿದ್ದಾನೆ. ಇದರಿಂದ ಆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ತನ್ನ ಅಪ್ಪನನ್ನು 23 ವರ್ಷದ ಮಗಳನ್ನು ತಡೆಯಲು ಪ್ರಯತ್ನಿಸಿದಾಗ ಆಕೆಗೆ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.