DAKSHINA KANNADA
ಸುಳ್ಯ – ಹಾಡುಹಗಲೇ ರಸ್ತೆಯಲ್ಲಿ ತಲ್ವಾರ್ ಹಿಡಿದು ಓಡಾಡಿದ ಯುವಕ

ಸುಳ್ಯ ಅಗಸ್ಟ್ 10: ಯುವಕನೊಬ್ಬ ಹಾಡು ಹಗಲೇ ತಲ್ವಾರ್ ಹಿಡಿದು ರಸ್ತೆ ಓಡಾಡಿ ಸ್ಥಳೀಯರಲ್ಲಿ ಕೆಲಕಾಲ ಆತಂಕ ಸೃಷ್ಠಿಸಿರುವ ಘಟನೆ ಕನಕಮಜಲು ಗ್ರಾಮದ ಸುಣ್ಣಮೂಲೆ ಎಂಬಲ್ಲಿ ನಡೆದಿದೆ.
ಯುವಕನನ್ನು ನಿವಾಸಿ ಸಂದೀಪ ಎಂದು ಗುರುತಿಸಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಇತ್ತೀಚೆಗೆ ಕೊಲೆಯಾದ ಪ್ರವೀಣ್ ನೆಟ್ಟಾರು ಅವರಿಗೆ ಶ್ರದ್ದಾಂಜಲಿ ಸಲ್ಲಿಸುವ ಕುರಿತ ಬ್ಯಾನರ್ ಅಳವಡಿಸಿಲು ಕನಕಮಜಲು ಪೇಟೆಯಲ್ಲಿ ಅನುಮತಿ ನೀಡಿಲ್ಲ ಎಂಬ ಕಾರಣಕ್ಕೆ ಕೋಪಗೊಂಡು ಈತ ತಲ್ವಾರ್ ಹಿಡಿದು ನಡೆದಾಡುತ್ತಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಯ ಗಂಭೀರತೆ ಅರಿತ ಪೊಲೀಸರು ಸ್ಥಳಕ್ಕೆ ಧಾವಿಸಿ ತಲವಾರು ವಶಪಡಿಸಿಕೊಂಡಿದ್ದಾರೆ.
