BANTWAL
ಬಂಟ್ವಾಳ – ತಾಳೆ ಮರದಿಂದ ಬಿದ್ದು ವ್ಯಕ್ತಿ ಸಾವು

ಬಂಟ್ವಾಳ: ತಾಳೆ ಮರದಿಂದ ಮೂರ್ತೆದಾರ ಮಾಡುತ್ತಿದ್ದ ಸಂದರ್ಭ ಆಯತಪ್ಪಿ ಮರದಿಂದ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನರಿಕೊಂಬು ಗ್ರಾಮದ ಕೆದ್ದೇಲು ಎಂಬಲ್ಲಿ ನಡೆದಿದೆ. ಮೃತರನ್ನು ಕೆದ್ದೇಲು ನಿವಾಸಿ ಪ್ರಕಾಶ್ ಕೆದ್ದೇಲು ಎಂದು ಗುರುತಿಸಲಾಗಿದೆ.
20 ವರ್ಷಗಳಿಂದ ತಾಳೆ ಮರದಿಂದ ಶೇಂದಿ ತೆಗೆಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ಪ್ರಕಾಶ್ ಅವರು ಗುರುವಾರ ತಾಳೆ ಮರದಿಂದ ಶೇಂದಿ ತೆಗೆಯಲು ಮರ ಏರಿದ್ದರು. ತಾಳೆ ಮರದಲ್ಲಿ ಮೂರ್ತೆದಾರಿಕೆ ಮಾಡುತ್ತಿದ್ದ ವೇಳೆಯಲ್ಲಿ ಆಯತಪ್ಪಿ ಮರದಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಬಳಿಕ ಆಸ್ಪತ್ರೆಗೆ ದಾಖಲಾಗಿಸಲಾಯಿತಾದರೂ ಚಿಕಿತ್ಸೆ ನೀಡುವ ಮೊದಲೇ ಅವರು ಮೃತಪಟ್ಟಿದ್ದರು.
ಸುಮಾರು 11.30 ಸಮಯದಲ್ಲಿ ಸ್ಥಳೀಯರು ತಾಳೆ ಮರದ ಬುಡದಲ್ಲಿ ಬಿದ್ದಿದ್ದ ಪ್ರಕಾಶ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಗಂಭೀರವಾಗಿ ತಲೆಗೆ ಗಾಯಗೊಂಡಿದ್ದರಿಂದ ಅದಾಗಲೇ ಪ್ರಕಾಶ್ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ .
