LATEST NEWS
ಕೊಲ್ಯ – ತೆಂಗಿನಮರದಿಂದ ಬಿದ್ದು ಮೂರ್ತೆದಾರ ಯಶೋಧರ ಸಾವು

ಮಂಗಳೂರು ಎಪ್ರಿಲ್ 11: ತೆಂಗಿನ ಮರದಿಂದ ಶೇಂದಿ ತೆಗೆಯುತ್ತಿದ್ದಾಗ ಆಯ ತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಮೂರ್ತೆದಾರ ಸಾವನ್ನಪ್ಪಿದ ಘಟನೆ ಕೊಲ್ಯ ಕಣೀರುತೋಟದಲ್ಲಿ ನಡೆದಿದೆ.
ಮೃತರನ್ನು ಕೊಲ್ಯ ಕಣೀರುತೋಟ, ಬಲ್ಯ ನಡುಪೊಲಿಕೆ ನಿವಾಸಿ ಯಶೋಧರ (46) ಎಂದು ಗುರುತಿಸಲಾಗಿದೆ. ಯಶೋಧರ್ ಅವರು ಶುಕ್ರವಾರ ಬೆಳಿಗ್ಗೆ ತನ್ನ ಮನೆ ತೋಟವೊಂದರ ಬಳಿ ಮೂರ್ತೆದಾರಿಕೆ ನಡೆಸುತ್ತಿದ್ದಾಗ ಆಯ ತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಅವರು ಮೃತಪಟ್ಟರು. ಯಶೋಧರ್ ಅವರು ಈ ಹಿಂದೊಮ್ಮೆ ಲೋ ಬಿಪಿ ಕಾರಣಕ್ಕೆ ಪ್ರಜ್ಞೆ ತಪ್ಪಿಬಿದ್ದಿದ್ದರು. ಲೋ ಬಿಪಿಯಿಂದಲೇ ತೆಂಗಿನ ಮರದಿಂದ ಬಿದ್ದಿರುವ ಸಾಧ್ಯತೆಯೂ ಇದೆ’ ಎಂದು ಅವರ ಆಪ್ತರು ತಿಳಿಸಿದ್ದಾರೆ.

1 Comment