LATEST NEWS
ಕಲ್ಲಿನ ಕ್ವಾರಿಯಲ್ಲಿ ಈಜಲು ಇಳಿದ ಯುವಕ ಸಾವು….!!

ಮಂಗಳೂರು ಜುಲೈ 25: ಈಜಲು ಕಲ್ಲಿನ ಕ್ವಾರಿಗೆ ಇಳಿದ ಯುವಕ ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಉಳಾಯಿಬೆಟ್ಟುವಿನ ಕಾಯರಪದವು ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ. ಮೃತ ಯುವಕನನ್ನು ಜೋಕಟ್ಟೆ ನಿವಾಸಿ ಶಿಯಾಬ್ (21) ಎಂದು ಗುರುತಿಸಲಾಗಿದೆ.
ಶಿಯಾಬ್ ಹಾಗೂ ಆತನ ಗೆಳೆಯರು ಕ್ರಿಕೆಟ್ ಆಟವಾಡಿ ನಂತರ ಅಲ್ಲಿಯೇ ಮೈದಾನದ ಪಕ್ಕದ್ದಲ್ಲಿ ಈಜಲು ಹೋದಾಗ ಅವಘಡ ಸಂಭವಿಸಿದೆ. ಕ್ವಾರಿಯ ನೀರು ತುಂಬಿದ ಹೊಂಡದಲ್ಲಿ ಈಜಲು ಸಾಧ್ಯವಾಗದೆ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
