LATEST NEWS
ಡಾಕ್ಟರ್ ಎದುರೇ ಹೃದಯಾಘಾತದಿಂದ ಸಾವನಪ್ಪಿದ ಯುವಕ – ಸಿಸಿಟಿವಿ ವಿಡಿಯೋ
ಇಂದೋರ್ ಅಗಸ್ಟ್ 19: ಆಸ್ಪತ್ರೆಗೆ ಆಗಮಿಸಿದ್ದ ವ್ಯಕ್ತಿಯೊಬ್ಬನ ವೈದ್ಯರು ತಪಾಸಣೆ ನಡೆಸುತ್ತಿದ್ದ ವೇಳೆ ಹೃದಯಾಘಾತದಿಂದ ಸಾವನಪ್ಪಿದ ಘಟನೆ ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ನಡೆದಿದೆ. ಈ ಘಟನೆ ಶನಿವಾರ ರಾತ್ರಿ ಪರದೇಶಿಪುರ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದ್ದು, ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
#REALWARFIGHTER brigadier I N Rai ‘ದೇಶಕ್ಕಾಗಿ ತ್ಯಾಗ ಮಾಡಿದವರ ಮುಂದೆ ನಾನು ಕಿರಿಯ’…! episode 1
ಮೃತರನ್ನು ಸೋನು ಎಂದು ಗುರುತಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಸೋನು ಆಸ್ಪತ್ರೆಗೆ ಹೋಗಿ ವೈದ್ಯರಿಂದ ವೈದ್ಯಕೀಯ ಸಲಹೆ ಪಡೆದಿದ್ದರು. ಆತ ವೈದ್ಯರೊಂದಿಗೆ ಮಾತನಾಡುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತವೆ, ವೈದ್ಯರು ಆತನನ್ನು ಪರೀಕ್ಷಿಸಲು ಪ್ರಾರಂಭಿಸಿದರು. ಇದ್ದಕ್ಕಿದ್ದಂತೆ, ಸೋನು ವೈದ್ಯರ ಮುಂದೆ ಕುಸಿದು ಬಿದ್ದಿದ್ದಾರೆ. ಕೂಡಲೇ ಆತನ ರಕ್ಷಿಸಿಲು ಪ್ರಯತ್ನಿಸಿದರು ಆತನ ಬದುಕಲಿಲ್ಲ. ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ಫಲಿತಾಂಶಗಳು ಸೋನು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದೆ.
ಡಾಕ್ಟರ್ ಎದುರೇ ಹೃದಯಾಘಾತದಿಂದ ಸಾವನಪ್ಪಿದ ಯುವಕ – ಸಿಸಿಟಿವಿ ವಿಡಿಯೋ pic.twitter.com/4XmzoIsvEW
— themangaloremirror (@themangaloremir) August 19, 2024