LATEST NEWS
ಕೋಟ ಮೂಲದ ವ್ಯಕ್ತಿ ಕತಾರ್ ನಲ್ಲಿ ನಿಧನ
ಕೋಟ ಡಿಸೆಂಬರ್ 31: ಕತಾರ್ನಲ್ಲಿ ಕೆಲಸ ಮಾಡುತ್ತಿದ್ದ ಕೋಟ ಮೂಲದ ವ್ಯಕ್ತಿಯೊಬ್ಬರು ಮಿದುಳು ನಿಷ್ಕ್ರಿಯಗೊಂಡು ಮೃತಪಟ್ಟ ಘಟನೆ ನಡೆದಿದೆ. ಕೋಟ ಸಮೀಪ ಕೋಟ ತಟ್ಟು ಪಡುಕರೆ ನಿವಾಸಿ ಮುಹಮ್ಮದ್ (45) ಮೃತ ದುರ್ದೈವಿ.
ಕತಾರ್ನ ಸನಯ್ಯ ಎಂಬಲ್ಲಿ 14 ವರ್ಷಗಳಿಂದ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಅವರು ನಾಲ್ಕು ದಿನಗಳ ಹಿಂದೆ ಕೆಲಸ ನಿರ್ವಹಿಸುತಿದ್ದಾಗ ಕುಸಿದು ಬಿದ್ದು, ಮಿದುಳು ನಿಷ್ಕ್ರಿಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಜನವರಿ 2 ರಂದು ಊರಿಗೆ ಬರಲು ಸಿದ್ದತೆ ನಡೆಸುತ್ತಿದ್ದರು. ದುರಾದೃಷ್ಟವಶಾತ್ ಇವರು ಚಿಕಿತ್ಸೆಗೆ ಫಲಕಾರಿಯಾಗದೆ ಅದಕ್ಕೂ ಮೊದಲೇ ಇಹಲೋಕ ತ್ಯಜಿಸಿದ್ದಾರೆ.
ಅವರು ಕೋಟತಟ್ಟು ಪಡುಕರೆ ಹಿದಾಯತುಲ್ ಇಸ್ಲಾಂ ಮದ್ರಸ ಕಾರ್ಯದರ್ಶಿಯಾಗಿ, ಕೆಸಿಎಫ್ ಕತಾರ್ ರಾಷ್ಟ್ರೀಯ ಸಮಿತಿಯ ಅಝೀಝಿಯಾ ಝೇನ್ ಸನಯ್ನಾ ಯುನಿಟ್ ಅಧ್ಯಕ್ಷರಾಗಿದ್ದರು. ಮೃತರು ತಾಯಿ, ಪತ್ನಿಯನ್ನು ಅಗಲಿದ್ದಾರೆ.