KARNATAKA
ಡಾಬಾ ಬಂತು ಊಟ ಮಾಡು ಎಂದಾಗ ಎದ್ದಿದ್ದವ…ಒಂದು ವಾರದ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರು

ಶಿಗ್ಗಾಂವಿ ಫೆಬ್ರವರಿ 15: ಸಾವನಪ್ಪಿದ್ದಾರೆ ಎಂದು ಆಸ್ಪತ್ರೆಯಿಂದ ಮನೆಗೆ ಕರೆ ತರುವಾಗ ಡಾಬಾ ಬಂತು ಊಟ ಮಾಡು ಎಂದು ಸಂಬಂಧಿಕರು ಹೇಳಿದ ವೇಳೆ ಬದುಕ್ಕಿದ್ದ ವ್ಯಕ್ತಿ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.
45 ವರ್ಷದ ಶಿಗ್ಗಾಂವಿ ತಾಳಲೂಕಿನ ಬಂಕಾಪುರ ಗ್ರಾಮದ ಬಿಷ್ಟಪ್ಪ ಗುಡಿಮನಿ ಎಂಬ ವ್ಯಕ್ತಿ ಈ ಹಿಂದೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದರು. ಆತನನ್ನು ವಾಪಸ್ ಕರೆತರುವಾಗ, ಹೆದ್ದಾರಿಯಲ್ಲಿ ಡಾಭಾ ಕಾಣಿಸಿಕೊಂಡಿದೆ. ಡಾಭಾ ಬಂತು ಊಟ ಮಾಡ್ತೀಯಾ ಎಂದು ಸಂಬಂಧಿಕರು ಗೋಳಾಡಿದಾಗ ಮೃತವ್ಯಕ್ತಿ ಮತ್ತೆ ಉಸಿರಾಡಲು ಶುರು ಮಾಡಿದ್ದ.

ಕೂಡಲೇ ಆತನನ್ನು ಶಿಗ್ಗಾವಿಯ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಜೀವಂತವಾಗಿ ಮನೆಗೆ ಕರೆತರಲಾಗಿತ್ತು. ಕಾಮಾಲೆ ರೋಗದಿಂದ ಬಳಲುತ್ತಿದ್ದ ಬಿಷ್ಟಪ್ಪನನ್ನು ಮರಳಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗಗೆ ದಾಖಲಿಸಲಾಗಿತ್ತು ನಿರಂತರ ಒಂದು ವಾರ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಿಷ್ಟಪ್ಪ ಇಂದು ಉಸಿರು ಚೆಲ್ಲಿದ್ದಾನೆ. ನಿಧನದ ಹಿನ್ನೆಲೆ ಇಂದು ಅವರ ಸ್ವಗ್ರಾಮ ಬಂಕಾಪುರದಲ್ಲಿ ಅಂತ್ಯಕ್ರಿಯೆ ನಡೆದಿದೆ.