DAKSHINA KANNADA
ಇಂಟರ್‌ನೆಟ್ ಕೇಬಲ್ ಅಳವಡಿಸುವ ವೇಳೆ ವಿದ್ಯುತ್ ಪ್ರವಹಿಸಿ ಆರ್ ಎಸ್ಎಸ್ ಕಾರ್ಯಕರ್ತ ಸಾವು

ಪುತ್ತೂರು ಡಿಸೆಂಬರ್ 27: ಪುತ್ತೂರಿನ ಕೋರ್ಟ್ ರೋಡಿನ ಮಾರ್ಕೆಟ್ ರಸ್ತೆಯಲ್ಲಿರುವ ವಿದ್ಯುತ್ ಕಂಬದಲ್ಲಿ ಇಂಟರ್ ನೆಟ್ ಕೇಬಲ್ ಅಳವಡಿಸುವ ವೇಳೆ ವಿದ್ಯುತ್ ಸ್ಪರ್ಶಗೊಂಡು ಆರ್ ಎಸ್ ಎಸ್ ಕಾರ್ಯಕರ್ತ ರೊಬ್ಬರು ಸಾವನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ಬೆಟ್ಟಂಪಾಡಿ ನಿವಾಸಿ ಆರ್ ಎಸ್ ಎಸ್ ಕಾರ್ಯಕರ್ತ ಪದ್ಮನಾಭ ಎಂದು ಗುರುತಿಸಲಾಗಿದೆ. ಇವರು ಪುತ್ತೂರು ಖಾಸಗಿ ಸಂಸ್ಥೆಯೊಂದರ ಅಡಿಯಲ್ಲಿ ಇಲ್ಲಿನ ಮೀನು ಮಾರುಕಟ್ಡೆಯ ಬಳಿ ಇಂಟರ್ ನೆಟ್ ಕೇಬಲ್ ಅಳವಡಿಸುವ ಕಾರ್ಯ ನಡೆಸುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ. ಪುತ್ತೂರು ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.
