DAKSHINA KANNADA
ಸುಬ್ರಹ್ಮಣ್ಯ – ರೈಲಿನಿಂದ ಬಿದ್ದು ಪ್ರಯಾಣಿಕನ ಕಾಲು ಮುರಿತ

ಸುಬ್ರಹ್ಮಣ್ಯ ಜನವರಿ 23:ಚಲಿಸುತ್ತಿದ್ದ ರೈಲಿಗೆ ಹತ್ತು ಹೋಗಿ ರೈಲಿನಿಂದ ಕಾಲುಜಾರಿ ಬಿದ್ದು ವ್ಯಕ್ತಿಯೋರ್ವರ ಕಾಲು ಮುರಿತಕ್ಕೊಳಗಾಗಿರುವ ಘಟನೆ ಸೋಮವಾರ ಮಧ್ಯಾಹ್ನ ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಸಂಭವಿಸಿದೆ.
ನೆಟ್ಟಣದ ನವಜೀವನ ಕಾಲನಿ ನಿವಾಸಿ ದೇವಸಹಾಯ ಗಾಯಗೊಂಡ ವ್ಯಕ್ತಿ. ಮಧ್ಯಾಹ್ನ ಮಂಗಳೂರಿಗೆ ತೆರಳುವ ರೈಲು ಹೊರಡಲು ಆರಂಭವಾದ ವೇಳೆ ಈ ವ್ಯಕ್ತಿ ಹತ್ತಲು ಯತ್ನಿಸಿದ ವೇಳೆ ಕಾಲು ಜಾರಿ ಘಟನೆ ಸಂಭವಿಸಿದೆ ಎನ್ನಲಾಗಿದೆ. ಸದ್ಯ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಗಾಯಾಳು ವ್ಯಕ್ತಿಯ ಕಾಲಿಗೆ ಗಂಭೀರ ಗಾಯವಾಗಿದೆ.

ನೆಟ್ಟಣದ ರೈಲು ನಿಲ್ದಾಣ ಪ್ರಮುಖ ರೈಲು ನಿಲ್ದಾಣವಾಗಿದೆ. ಇಲ್ಲಿ ಆಗಸ್ಟ್ ನಲ್ಲೂ ವ್ಯಕ್ತಿಯೋರ್ವರು ರೈಲು ಡಿಕ್ಕಿಯಾಗಿ ಕಾಲು ಮುರಿತಕ್ಕೊಳಗಾಗಿತ್ತು. ಸೋಮವಾರದ ಘಟನೆ ಕೆಲ ತಿಂಗಳ ಅಂತರದ ಎರಡನೇ ಅವಘಡವಾಗಿದೆ.