KARNATAKA
ರೀಲ್ಸ್ ಗಾಗಿ ರಸ್ತೆ ಮಧ್ಯೆ ಖುರ್ಚಿ ಹಾಕಿ ಟೀ ಕುಡಿದವನಿಗೆ ಸ್ಟೇಷನ್ ನಲ್ಲಿ ಕಾನೂನಿನ ರುಚಿ ತೋರಿಸಿದ ಪೊಲೀಸರು

ಬೆಂಗಳೂರು ಎಪ್ರಿಲ್ 18: ರೀಲ್ಸ್ ಹುಚ್ಚಿಗೆ ನಡು ರಸ್ತೆಯಲ್ಲಿ ಚೇರ್ ಹಾಕಿ ಟೀ ಕುಡಿಯಲು ಹೋದ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿ ಟೀ ಜೊತೆ ಕಾನೂನಿನ ರುಚಿ ತೋರಿಸಿದ್ದಾರೆ.
ರಾಮಣ್ಣ ಗಾರ್ಡನ್ ನಿವಾಸಿ ಪ್ರಶಾಂತ್ ಅಲಿಯಾಸ್ ಸಿಂಬು ಆರೋಪಿತನಾಗಿದ್ದು, ಇತ್ತೀಚಿಗೆ ಎಸ್.ಜಿ.ಪಾರ್ಕ್ ಬಳಿ ನಡು ರಸ್ತೆ ಯಲ್ಲಿ ಕುರ್ಚಿ ಹಾಕಿಕೊಂಡು ಚಹಾ ಕುಡಿ ಯುತ್ತ ಆತ ರೀಲ್ಸ್ ಮಾಡಿದ್ದ. ಈ ಹುಚ್ಚಾಟ ದಿಂದ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ವಿಡಿಯೋವನ್ನು ಗಂಭೀರ ವಾಗಿ ಪರಿಗಣಿಸಿದ ಪೊಲೀಸರು, ರಸ್ತೆಯಲ್ಲಿ ವಾಹನಗಳಿಗೆ ಅಡ್ಡಪಡಿಸಿದ ಆರೋಪದ ಮೇರೆಗೆ ಬಂಧಿಸಿ ಬಳಿಕ ಠಾಣಾ ಜಾಮೀನು ಮೇರೆಗೆ ಬಿಡುಗಡೆಗೊಳಿಸಿದ್ದಾರೆ. ಈ ರೀತಿ ವರ್ತನೆ ತೋರಿದರೆ ಕಠಿಣ ಕ್ರಮ ಜರುಗಿಸ ಬೇಕಾಗುತ್ತದೆ ಎಂದು ಚಾಲಕನಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ತನ್ನ ಕುಟುಂಬದ ಜತೆ ನೆಲೆಸಿರುವ ಪ್ರಶಾಂತ್, ಟೆಂಪೋಓಡಿಸಿಕೊಂಡು ಜೀವನ ಸಾಗಿಸುತ್ತಿದ್ದಾನೆ. ರೀಲ್ಸ್ ಹುಚ್ಚಿಗೆ ಈಗ ಮೈ ಮೇಲೆ ಕೇಸ್ ಹಾಕಿಸಿಕೊಂಡು ಆತ ಸಂಕಷ್ಟ ಎದುರಿಸಬೇಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

1 Comment