BELTHANGADI
ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ – ಆರೋಪಿ ಪೊಲೀಸ್ ವಶಕ್ಕೆ

ಬೆಳ್ತಂಗಡಿ: ಮದುವೆಯಾಗಿ ನಂಬಿಸಿ ಯುವತಿಯನ್ನು 7 ತಿಂಗಳ ಗರ್ಭಿಣಿಯನ್ನಾಗಿಸಿದ ಯುವಕನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬೆಳ್ತಂಗಡಿಯ ಲಾಯಿಲದ ಕಿರಣ್ ಎಂದು ಗುರುತಿಸಲಾಗಿದ್ದು, ಯುವತಿಯೊಂದಿಗೆ ಸಲುಗೆಯಿಂದ ಇದ್ದ ಕಿರಣ್ ಆಗಾಗ ಆಕೆಯ ಮನೆಗೆ ಹೋಗಿ ಬರುತ್ತಿದ್ದು. ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇದರಿಂದ ಯುವತಿ ಏಳೂವರೆ ತಿಂಗಳ ಗರ್ಭಾವತಿಯಾಗಿದ್ದು, ನಂತರ ಮದುವೆಯಾಗಲು ನಿರಾಕರಿಸಿ ಮೋಸ ಮಾಡಿದ್ದಾನೆ. ಈ ಹಿನ್ನಲೆ ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಬೆಳ್ತಂಗಡಿ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದೇ ಆರೋಪಿಯ ವಿರುದ್ಧ ವರ್ಷದ ಹಿಂದೆ ಅಪ್ರಾಪ್ತ ಯುವತಿಯ ವಿರುದ್ಧ ಅತ್ಯಾಚಾರ ಹಾಗೂ ಬಲತ್ಕಾರದ ಮದುವೆ ಬಗ್ಗೆ ದೂರು ದಾಖಲಾಗಿತ್ತು.