LATEST NEWS
ಉಡುಪಿ – ವಿಧ್ಯಾರ್ಥಿನಿಯರ ಎದುರು ವಿಕೃತವಾಗಿ ವರ್ತಿಸುತ್ತಿದ್ದ ಬಸ್ ಕಂಡಕ್ಟರ್ ಪೊಲೀಸ್ ವಶಕ್ಕೆ

ಉಡುಪಿ ನವೆಂಬರ್ 12: ವಿಧ್ಯಾರ್ಥಿನಿಯರ ಎದುರು ವಿಕೃತಕಾಮಿಯಂತೆ ಆಡುತ್ತಿದ್ದ ಬಸ್ ನಿರ್ವಾಹಕನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕುಕ್ಕಿಕಟ್ಟೆ ನಿವಾಸಿ ಉಪೇಂದ್ರ ಯಾನೆ ಉಮಾಶಂಕರ್ ಭಂಡಾರಿ ಎಂದು ಗುರುತಿಸಲಾಗಿದೆ. ಈತ ಕಳೆದ ಹಲವಾರು ದಿನಗಳಿಂದ ಕಾಲೇಜಿನ ವಿದ್ಯಾರ್ಥಿನಿಯರೊಂದಿಗೆ ಅನೈತಿಕವಾಗಿ ವಿಕೃತವಾಗಿ ವರ್ತಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಸಂತೆಕಟ್ಟೆಯ ನರ್ಸಿಂಗ್ ಕಾಲೇಜಿನ ಬಳಿ ವಿದ್ಯಾರ್ಥಿನಿಯರನ್ನು ಕಂಡೊಡನೆ ವಿಕೃತವಾಗಿ ವರ್ತಿಸುತ್ತಿದ್ದ ಈತನ ವಿರುದ್ದ ಕಾಲೇಜು ಹಾಸ್ಟೆಲ್ ಆಡಳಿತಾಧಿಕಾರಿಗಳು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪೊಲೀಸರು ಆರೋಪಿಯನ್ನು ಬಂಧಿಸಿ ಮಾನಭಂಗ ದೂರು ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.