Connect with us

    LATEST NEWS

    ತೊಕ್ಕೊಟ್ಟು – ಮಸೀದಿಗೆ ನುಗ್ಗಿ ಮಹಿಳೆಯರ ಎದುರು ಅಸಭ್ಯ ವರ್ತನೆ ಆರೋಪಿ ಅರೆಸ್ಟ್

    ಮಂಗಳೂರು ಎಪ್ರಿಲ್ 30: ಮಸೀದಿಗೆ ನುಗ್ಗಿ ಮಹಿಳೆಯರ ಎದುರು ಅಸಭ್ಯವಾಗಿ ವರ್ತಿಸಿದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ತೊಕ್ಕೊಟ್ಟುವಿನಲ್ಲಿ ನಡೆದಿದೆ.


    ಬಂಧಿತ ಆರೋಪಿಯನ್ನು ಕಾರ್ಕಳ ತಾಲೂಕಿನ ನಿಟ್ಟೆ ನಿವಾಸಿ ಸುಜಿತ್ ಶೆಟ್ಟಿ(26) ಎಂದು‌ ಗುರುತಿಸಲಾಗಿದೆ. ಆರೋಪಿ ತೊಕ್ಕೊಟ್ಟಿನ ಹುದಾ ಜುಮ್ಮಾ ಮಸೀದಿಯಲ್ಲಿ ಮಹಿಳೆಯರು ನಮಾಜ್ ಮಾಡುವ ಕೊಠಡಿಗೆ‌ ಮಹಿಳೆಯರ ಎದುರು ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.

    ತೊಕ್ಕೊಟ್ಟಿನ ಹುದಾ ಜುಮ್ಮಾ ಮಸೀದಿಯಲ್ಲಿ ಲೈಲಾತುಲ ಖದರ್ ನ ರಾತ್ರಿ ವಿಶೇಷ ಕಾರ್ಯಕ್ರಮವನ್ನು ಕಳೆದ 28 ರಂದು ಏರ್ಪಡಿಸಲಾಗಿದ್ದು, ಈ ವೇಳೆ ಆರೋಪಿ ಸುಜಿತ್ ಶೆಟ್ಟಿಯು ಮಸೀದಿಯಲ್ಲಿ ಮಹಿಳೆಯರು ನಮಾಜ್ ಮಾಡುವ ಕೊಠಡಿಗೆ‌ ನುಗ್ಗಿ ಮಹಿಳೆಯರ ಕೈಹಿಡಿದು ಎಳೆದು, ಅಶ್ಲೀಲವಾಗಿ ವರ್ತಿಸಿದ್ದಾನೆ ಎಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply