LATEST NEWS
ರೀಲ್ಸ್ ಗಾಗಿ ರಸ್ತೆ ಮಧ್ಯೆ ಹೆಣದಂತೆ ಮಲಗಿದ ಯುವಕ – ಅರೆಸ್ಟ್ ಮಾಡಿ ಜೈಲಲ್ಲಿ ಮಲಗಿಸಿದ ಪೊಲೀಸರು
ಉತ್ತರಪ್ರದೇಶ ಸೆಪ್ಟೆಂಬರ್ 17: ಇತ್ತೀಚೆಗೆ ರೀಲ್ಸ್ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸಾರ್ವಜನಿಕರಿಗೆ ತೊಂದರೆ ಕೊಟ್ಟು ರೀಲ್ಸ್ ಹುಚ್ಚಾಟ ಜಾಸ್ತಿಯಾಗಿದೆ. ಅದೇ ರೀತಿ ಯುವಕನೊಬ್ಬ ರಸ್ತೆ ಮಧ್ಯೆ ಹೆಣದಂತೆ ಮಲಗಿ ರೀಲ್ಸ್ ಮಾಡಿದ್ದಾನೆ. ಈ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಹೀಗೆ ತನ್ನದೇ ಸಾವಿನ ನಾಟಕವಾಡಿದ ಯುವಕನನ್ನು ಪೊಲೀಸರು ಕರೆದುಕೊಂಡು ಹೋಗಿ ಕಂಬಿ ಹಿಂದೆ ಕೂರಿಸಿದ್ದಾರೆ.
ಹೀಗೆ ತನ್ನದೇ ಸಾವಿನ ನಾಟಕವಾಡಿದ ಯುವಕನನ್ನು ಮುಕೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ತನ್ನ ಸ್ನೇಹಿತರ ಜೊತೆ ಸೇರಿ ಬ್ಯುಸಿಯಾದ ರಸ್ತೆಯಲ್ಲಿ ಹೆಣದಂತೆ ಕತ್ತಿಗೆ ಹೂವಿನ ಹಾರ ಹಾಕಿಕೊಂಡು ಮೈ ಮೇಲೆ ಬಿಳಿವಸ್ತ್ರ ಹೊದ್ದುಕೊಂಡು ಹೆಣಕ್ಕಿಂತ ನಾನೇನು ಕಡಿಮೆ ಎಂದು ಮೂಗಿಗೂ ಹತ್ತಿ ಇಟ್ಟುಕೊಂಡು ನಡುರಸ್ತೆಯಲ್ಲಿ ಮಲಗಿದ್ದರೆ ಇತ್ತ ಈತನ ಸ್ನೇಹಿತರು ಈ ದೃಶ್ಯವನ್ನು ವೀಡಿಯೋ ಮಾಡಿದ್ದಾರೆ.
ಆತ ಮುಕೇಶ್ ಬಂಧಿತನಾಗಿದ್ದರೂ ಆತನ ಆಸೆಯಂತೆ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋ ನಂತರದಲ್ಲಿ ವೈರಲ್ ಆಗಿದ್ದು, ಮುಕೇಶ್ನನ್ನು ಹಿಡಿದು ಠಾಣೆಗೆ ಕರೆತಂದ ಪೊಲೀಸರು ರಸ್ತೆಯಲ್ಲಿ ಮಲಗಿದವನನ್ನು ಕಂಬಿ ಹಿಂದೆ ಕೂರಿಸಿದ್ದಾರೆ. ಇನ್ನು ವೀಡಿಯೋ ನೋಡಿದ ಜನರು ಕೂಡ ಈ ರೀಲ್ಸ್ ರಾಜನ ಹುಚ್ಚುತನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
#reels #UttarPradsh
ರೀಲ್ಸ್ ಗಾಗಿ ರಸ್ತೆ ಮಧ್ಯೆ ಹೆಣದಂತೆ ಮಲಗಿದ ಯುವಕ – ಅರೆಸ್ಟ್ ಮಾಡಿ ಜೈಲಲ್ಲಿ ಮಲಗಿಸಿದ ಪೊಲೀಸರು pic.twitter.com/iNjGQ37G8I— themangaloremirror (@themangaloremir) September 17, 2024
You must be logged in to post a comment Login