Connect with us

LATEST NEWS

ಆಭರಣ ತಯಾರಿಕಾ ಸಂಸ್ಥೆಯ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು

ಉಡುಪಿ ಡಿಸೆಂಬರ್ 08: ಕೇಳಾರ್ಕಳಬೆಟ್ಟು ಸ್ವರ್ಣೋದ್ಯಮ ಚಿನ್ನದ ಆಭರಣ ತಯಾರಿಕಾ ಸಂಸ್ಥೆಯಲ್ಲಿ ನಡೆದ ಕಳ್ಳತನದ ಪ್ರಕರಣವನ್ನು ಭೇದಿಸುವಲ್ಲಿ ಮಲ್ಪೆ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಯಿಂದ 7 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.


ಬಂಧಿತ ಆರೋಪಿಯನ್ನು ಪಶ್ಚಿಮ ಬಂಗಾಳ ಮೂಲದ ಸುಭಾಶಿಷ್ ಬೇರಾ ಎಂದು ಗುರುತಿಸಲಾಗಿದೆ. ನವೆಂಬರ್ 25 ರಂದು ಈ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಕೇಳಾರ್ಕಳಬೆಟ್ಟು ಸ್ವರ್ಣೋದ್ಯಮ ಚಿನ್ನದ ಆಭರಣ ತಯಾರಿಕ ಸಂಸ್ಥೆಯಲ್ಲಿ 126 ಗ್ರಾಂ ಚಿನ್ನದ ಆಭರಣ ಕಳ್ಳತನ ಮಾಡಿದ್ದ .ಈ ಕಾರ್ಯಾಚರಣೆಯಲ್ಲಿ ಮಲ್ಪೆ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಗುರುನಾಥ ಬಿ ಹಾದಿಮನಿ ಅವರೊಂದಿಗೆ ಠಾಣಾ ಸಿಬ್ಬಂದಿಗಳಾದ ಎ ಎಸ್ಐ ರವಿಚಂದ್ರ , ಹೆಚ್ ಸಿ ಸುರೇಶ್, ಹೆಚ್ ಸಿ ಜಯರಾಮ, ಹೆಚ್.ಸಿ ಸಂತೋಷ ಎಸ್ , ಹೆಚ್.ಸಿ ಲೋಕೇಶ್ , ಪಿಸಿ ಲಕ್ಷ್ಮಣ, ಪಿಸಿ ಜಗದೀಶ, ಪಿಸಿ ಸಚಿನ್ ಮಹೆಚ್ ಸಿ ಮಾಲತಿ,ಪಿಸಿ ಇಂದ್ರೇಶ್, ಜೀಪು ಚಾಲಕರಾದ ಎ ಹೆಚ್ ಸಿ ಮಹಾಬಲೇಶ್ವರ ,ಎ.ಹೆಚ್ ಸಿ ಸಲೀಂವುಲ್ಲಾ ಭಾಗವಹಿಸಿರುತ್ತಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *