LATEST NEWS
ಹೈಟೆನ್ಶನ್ ವಿದ್ಯುತ್ ಕಂಬ ಏರಿದ ಮಾನಸಿಕ ಅಸ್ವಸ್ಥ..!!

ಉಡುಪಿ ನವೆಂಬರ್ 25: ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ ಉಡುಪಿಯಲ್ಲಿ ನಡೆದಿದೆ.
ಉಡುಪಿ ತಾಲೂಕಿನ ಮಲ್ಪೆಯ ಬಸ್ಸು ನಿಲ್ದಾಣದ ಬಳಿ ಕಟ್ಟಡಕ್ಕೆ ತಾಗಿಕೊಂಡಿರುವ ಹೈಟೆನ್ಶನ್ ಕಂಬ ಏರಿದ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸ್ಥಳಕ್ಕಾಗಮಿಸಿದ ಮಲ್ಪೆ ಠಾಣೆ ಪೊಲೀಸರು ಹರಸಾಹಸ ಪಟ್ಟು ಆತನನ್ನು ಕಂಬದಿಂದ ಇಳಿಸಿ ವಿಚಾರಿಸಿದಾಗ ಆತ ಅಸ್ಪಷ್ಟವಾಗಿ ಉತ್ತರಿಸಿದ್ದಾನೆ.

ಹೆಚ್ಚಿನ ವಿಚಾರಣೆಯಲ್ಲಿ ಈತ ಫಕೀರಪ್ಪ ಸವದತ್ತಿ ಮೂಲದವ ಅಲ್ಲದೆ ಈತ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ. ಸಧ್ಯ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.