LATEST NEWS
ಪ್ರತಿ ದಿನ ಮಲ್ಪೆ ಬಂದರಿನಲ್ಲಿ ಕಳುವು ಆಗುತ್ತದೆ… ಪ್ರತಿದಿನ ಎಫ್ಐಆರ್ ಬರೆದರೆ ಠಾಣೆಯಲ್ಲಿ ಬುಕ್ ಸಾಕಾಗಲಿಕ್ಕಿಲ್ಲ

ಉಡುಪಿ ಮಾರ್ಚ್ 24: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ನಡೆಯುವ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರತಿದಿನ ಎಫ್ಐಆರ್ ಬರೆದರೆ ಠಾಣೆಯಲ್ಲಿ ಬುಕ್ ಸಾಕಾಗಲಿಕ್ಕಿಲ್ಲ, ಪ್ರತಿದಿನ ಕಳ್ಳತನ ನಡೆಯುತ್ತೇ ಪ್ರತಿದಿನ ಕೇಸ್ ಹಾಕ್ತಿರಾ ಎಂದು ಬಂಜಾರ ಸಮುದಾಯದ ಸ್ಥಳೀಯ ಮುಖಂಡ ಮಂಜುನಾಥ ಚೌಹಾಣ್ ಪ್ರಶ್ನಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು ನಾವು ಬಂದರಿನಲ್ಲಿ 20 ವರ್ಷದಿಂದ ಕೆಲಸ ಮಾಡುತ್ತಿದ್ದೇವೆ, ಮೊನ್ನೆ ನಡೆದಿರುವುದು ಚಿಕ್ಕ ಘಟನೆ, ಈ ಘಟನೆಯಲ್ಲಿ ಇಬ್ಬರ ತಪ್ಪು ಇದೆ. ಅದೇ ದಿನ ರಾಜ ಸಂಧಾನ ಮಾಡಿಕೊಂಡಿದ್ದೇವೆ. ಬಂದರಿನಲ್ಲಿ ಯಾವುದೇ ಗಲಾಟೆಯಾದರೂ ರಾಜ್ಯಸಂಧಾನದ ಮೂಲಕ ಇತ್ಯರ್ಥ ಆಗುತ್ತೆ ಎಂದರು.

ಪ್ರತಿ ದಿನ ಬಂದರಿನಲ್ಲಿ ಕಳುವು ಆಗುತ್ತೆ, ಪ್ರತಿದಿನ ಎಫ್ಐಆರ್ ಬರೆದರೆ ಠಾಣೆಯಲ್ಲಿ ಬುಕ್ ಸಾಕಾಗಲಿಕ್ಕಿಲ್ಲ, ಕದ್ದ ಮಹಿಳೆ ಮೇಲೆ ಕೇಸ್ ಮಾಡಿದರೆ ಅವರ ಮಕ್ಕಳ ಗತಿ ಏನಾಗುತ್ತಿತ್ತು, ಮೀನುಗಾರರು ಕದ್ದ ಮಹಿಳೆ ಮೇಲೆ ಯಾವುದೇ ಕೇಸು ಮಾಡಿರಲಿಲ್ಲ, ಎರಡು ಪೆಟ್ಟು ಹೊಡೆದು ರಾಜಿ ಮಾಡಿದ್ದಾರೆ ಎಂದರು. ವಿಡಿಯೋ ವೈರಲ್ ಮಾಡಿ ನಮಗೆಲ್ಲ ಉಪದ್ರ ಮಾಡಬೇಡಿ, ನಮಗೆ ಯಾರಿಗೂ ಈ ಘಟನೆಯಿಂದ ತೊಂದರೆ ಆಗಿಲ್ಲ. ನಮ್ಮ ನಡುವೆ ಜಾತಿ ಬೇದ ತರಬೇಡಿ ಎಂದರು.
ಪ್ರಮೋದ್ ಮದ್ವರಾಜ್ ದೇವರಂತ ಮನುಷ್ಯ, ನಾವು ಸೇವಾಲಾಲ್ ಜಯಂತಿ ಮಾಡಿದರೆ ಅವರು ಬೆಂಬಲ ಮಾಡುತ್ತಾರೆ. ನಮಗೆ ಹೆಚ್ಚು ಡೊನೇಷನ್ ಕೊಡ್ತಾರೆ. ನಮ್ಮ ಎಲ್ಲಾ ಕಾರ್ಯಕ್ರಮಗಳಿಗೆ ಅವರೇ ಮುಂದೆ ಬಂದು ಸಹಾಯ ಮಾಡುತ್ತಾರೆ. ಈ ಪ್ರಕರಣದಲ್ಲಿ ರಾಜಕೀಯ ತರಬೇಡಿ. ನಮ್ಮ ಊರಿನಲ್ಲಿ ಪಂಚಾಯಿತಿ ಇದ್ದ ಹಾಗೆ ಬಂದರಿನಲ್ಲಿ ತೀರ್ಮಾನ ಆಗುತ್ತೆ, ಮಲ್ಪೆ ಬಂದರಿನಲ್ಲಿ ಪಂಚಾಯ್ತಿಯೇ ಮುಖ್ಯ ಕಾನೂನು ಅಲ್ಲ, ಏನೇ ತೊಂದರೆ ಆದರೂ ಬಂದರಿನ ಪಂಚಾಯಿತಿಯಲ್ಲಿ ಸರಿಯಾಗುತ್ತದೆ ಎಂದರು.
ಬೊಗಳುವ ಪ್ರತಿ ನಾಯಿಗೂ ಕಲ್ಲು ಎಸಿತಾ ಕೂತ್ರೆ ನಾವು ಮುಂದೆ ಹೋಗ್ಲಿಕ್ಕೆ ಆಗತ್ತಾ ?: ಚೈತ್ರ ಕುಂದಾಪುರ
ಬಂಜಾರ ಸಮುದಾಯದ ರಾಷ್ಟ್ರೀಯ ಸಂಘಟನೆ ( ಗೋರ್ ಮಳಾವ್)ಕಾರ್ಯದರ್ಶಿ ಜಯಸಿಂಹ ಮಾತನಾಡಿ ಹಲ್ಲೆ ನಡೆಸಿರುವುದು ಆಕಸ್ಮಿಕ ಘಟನೆ ರಾಜಿ ಸಂಧಾನ ಮಾಡಿದ್ದೇವೆ ಎಂದು ಸಂತ್ರಸ್ತೆ ಕೂಡ ಹೇಳಿದ್ದಾರೆ. ಆದರೆ ಕೆಲವು ರಾಜಿ ಸಂಧಾನಕ್ಕೆ ಎಂದು ಹೇಳಿ ಸಹಿ ಪಡೆದಿದ್ದಾರೆ. ಅಲ್ಲದೆ ಮಹಿಳೆಗೆ ಎಫ್ ಐ ಆರ್ ಆಗಿರೋದು ನನಗೆ ಗೊತ್ತೇ ಇಲ್ಲ, ನಾವು ಮೀನುಗಾರರ ಜೊತೆ ಚೆನ್ನಾಗಿ ಬದುಕುತ್ತಿದ್ದೇವೆ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವೈಭವೀಕರಣ ಆಗಿದೆ ಎಂದರು.
ಮೀನುಗಾರರು ಇಲ್ಲಿನ ಮೂಲತಃ ನಿವಾಸಿಗಳು, ನಾವು ಸುಮಾರು ಮೂರು ಸಾವಿರ ಜನ ಬದುಕು ಕಟ್ಟಿಕೊಳ್ಳಲು ಬಂದಿದ್ದೇವೆ. ಗೋವಾ ಕೇರಳ ಮಂಗಳೂರು ಉಡುಪಿ ಬಂದಿದ್ದೇವೆ. ನಾವು ಹೊಟ್ಟೆಪಾಡಿಗೆ ದುಡಿಯುವ ಜನ, ಮಲ್ಪೆಯಲ್ಲೂ ಮೂರು ಸಾವಿರ ಜನ ವಿಜಯಪುರ ಗದಗದಿಂದ ಬಂದಿದ್ದಾರೆ. ಎಲ್ಲೂ ಕೂಡ ಜಾತಿ ಕಟ್ಟುಪಾಡು ಮಾಡಿಲ್ಲ, ಯಾರು ಕೂಡ ನಮಗೆ ಜಾತಿ ಕೇಳಿ ಕೆಲಸ ಕೊಟ್ಟಿಲ್ಲ, ಜಾತಿಯ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ ಅನ್ನೋದು ಸರಿಯಲ್ಲ, ನಮ್ಮ ಹಳ್ಳಿಗಳಿಗಿಂತ ಮಕ್ಕಳು ಇಲ್ಲಿ ಚೆನ್ನಾಗಿ ವಿದ್ಯಾಭ್ಯಾಸ ಪಡೆಯುತ್ತಾರೆ. ನಮ್ಮ ಊರಿಗಿಂತ ಒಳ್ಳೆಯ ಜೀವನ ನಡೆಸುತ್ತಿದ್ದಾರೆ.
ಈ ಪ್ರಕರಣವನ್ನು ಇಲ್ಲಿಗೆ ಸುಖಾಂತ್ಯ ಮಾಡಿ, ಅಣ್ಣ ತಮ್ಮಂದಿರ ರೀತಿ ಬದುಕಲು ಬಿಡಿ ಎಂದು ಹೇಳಿದ ಅವರು ಜಿಲ್ಲಾಡಳಿತ ರಾಜೀಸಂಧಾನಕ್ಕೆ ಮಹತ್ವ ನೀಡಬೇಕು, ಕೇಸನ್ನು ಬಿ ರಿಪೋರ್ಟ್ ಹಾಕಬೇಕು ವಜಾ ಮಾಡಬೇಕು ಅಲ್ಲದೆ ಪ್ರಕರಣವನ್ನು ರದ್ದು ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡುತ್ತೇನೆ ಎಂದರು.