Connect with us

UDUPI

ರಾಜ್ಯೋತ್ಸವದ ಅಂಗವಾಗಿ ಮಲ್ಪೆ ಬೀಚ್ ನಲ್ಲಿ ಸ್ವಚ್ಛತಾ ಕಾರ್ಯಕ್ರಮ

ಉಡುಪಿ ನವೆಂಬರ್ 1: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಮಲ್ಪೆ ಬೀಚ್ ನಿಂದ ಸೀ -ವಾಕ್ ವರೆಗಿನ ಕಡಲ ತೀರದ ಸ್ವಚ್ಛತಾ ಕಾರ್ಯಕ್ರಮ ಮಂಗಳವಾರ ಮಲ್ಪೇ ಬೀಚ್ ಅಭಿವೃದ್ಧಿ ಸಮಿತಿಯಿಂದ ಉಡುಪಿ ನಗರಸಭೆ ಸಹಕಾರದೊಂದಿಗೆ ನಡೆಯಿತು.
ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಸಾಧು ಸಾಲ್ಯಾನ್ ರವರು ಕಸ ತೆಗೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಸಮಿತಿ ಅಧ್ಯಕ್ಷ ರಾದ ಪಾಂಡುರಂಗ ಮಲ್ಪೆ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ನಗರ ಸಭಾ ಸದಸ್ಯರಾದ ವಿಜಯ ಕುಂದರ್ ಶುಭ ಹಾರೈ ಸಿದರು. ಈ ಕಾರ್ಯಕ್ರಮದಲ್ಲಿ ಮಲ್ಪೆಯ ಐದು ಭಜನಾ ಮಂದಿರಗಳಾದ ಶ್ರೀ ಹನುಮಾನ್ ವಿಠೋಬ ಭಜನಾ ಮಂದಿರ. ಹನುಮಾನ್ ನಗರ. ಬಾಲಕರ ಶ್ರೀ ರಾಮ ಭಜನಾ ಮಂದಿರ ಕೊಳ.

ಶ್ರೀ ಶಿವ ಪಂಚಾಕ್ಷರಿ ಭಜನಾ ಮಂದಿರ, ಕೊಳ. ಶ್ರೀ ಜ್ಞಾನ ಜ್ಯೋತಿ ಭಜನಾ ಮಂದಿರ, ಕಡಲತೀರ, ಮಲ್ಪೆ. ಭಕ್ತಿ ಉದಯ ಶ್ರೀ ಪಂಡರಿನಾಥ ಭಜನಾ ಮಂದಿರ, ವಡಭಾಂಡೇಶ್ವರ ಇದರ ಮಾತೃ ಮಂಡಳಿ ಯ ಸದಸ್ಯರು, ಮಲ್ಪೆ ಬೀಚ್ನ ಗುತ್ತಿಗೆದಾರರಾದ ಮಂತ್ರ ಟೂರಿಸಮ್ನ ಸುದೇಶ್ ಶೆಟ್ಟಿ ಮತ್ತು ತಂಡ, ಮಲ್ಪೆ ಬೀಚ್ ಪ್ರವಾಸಿ ಬೋಟ್, ಅಂಗಡಿ ವ್ಯಾಪಾರಸ್ಥರು, ಬೀಚ್ ವ್ಯಾಪಾರಸ್ಥರು ಭಾಗವಹಿಸಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *