LATEST NEWS
ಮಲ್ಪೆ ಕಡಲಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಂಡ ಯುವಕ – ಇಬ್ಬರ ರಕ್ಷಣೆ ಮಾಡಿದ ಈಶ್ವರ ಮಲ್ಪೆ ತಂಡ
ಮಲ್ಪೆ ಎಪ್ರಿಲ್ 18: ಮಲ್ಪೆ ಸಮುದ್ರ ತೀರದಲ್ಲಿ ಈಜಾಡಲು ಹೋಗಿ ಅಲೆಗಳ ಹೊಡೆತಕ್ಕೆ ಸಮುದ್ರ ಪಾಲಾಗುತ್ತಿದ್ದ ಮೂವರು ಯುವಕರಲ್ಲಿ ಇಬ್ಬರನ್ನು ಮಲ್ಪೆ ಕಡಲ ತೀರದ ರಕ್ಷಣಾ ತಂಡ ರಕ್ಷಣೆ ಮಾಡಿದ್ದು, ಓರ್ವ ಯುವಕ ಸಾವನಪ್ಪಿದ ಘಟನೆ ಇಂದು ನಡೆದಿದೆ.
ಮೃತಪಟ್ಟವರನ್ನು ಹಾಸನ ಜಿಲ್ಲೆ ದಾಬೆ ಬೇಲೂರು ನಿವಾಸಿ ಗಿರೀಶ್ (26) ಎಂದು ಗುರುತಿಸಲಾಗಿದೆ. ಸಂತೋಷ್ (24) ಹಾಗೂ ಹರೀಶ್ (30)ರನ್ನು ರಕ್ಷಿಸಲಾಗಿದೆ.
ಹಾಸನ ಜಿಲ್ಲೆ ದಾಬೆ ಬೇಲೂರಿನಿಂದ 20 ಮಂದಿಯ ತಂಡ ಜಿಲ್ಲೆ ಪ್ರವಾಸಕ್ಕೆ ಬಂದಿದ್ದು, ಇಂದು ಮಲ್ಪೆ ಬೀಚ್‌ಗೆ ಆಗಮಿಸಿದ್ದರು. ಇವರು ಶೃಂಗೇರಿ, ಆಗುಂಬೆಗೆ ಭೇಟಿ ನೀಡಿ ಮಲ್ಪೆ ಬಂದಿದ್ದರೆಂದು ಹೇಳಲಾಗಿದೆ. ಮಲೆ ಬೀಚ್‌ಗೆ ಬಂದ ತಂಡದ ಮೂರು ಸಮುದ್ರಕ್ಕಿಳಿದು ನೀರಿನಲ್ಲಿ ಆಟವಾಡ ತೊಡಗಿದ್ದರು. ಮಧ್ಯಾಹ್ನದ ದೊಡ್ಡ ಅಲೆಗಳ ಸೆಳೆತಕ್ಕೆ ಸಿಕ್ಕಿ ಇವರು ಕೊಚ್ಚಿ ಹೋಗಿದ್ದಾರೆ. ತತ್‌ಕ್ಷಣವೇ ಸ್ಥಳಕ್ಕೆ ಧಾವಿಸಿ ಬಂದ ಮುಳುಗು ತಜ್ಞ ಈಶ್ವರ ಮಲ್ಪೆ ಮತ್ತವರ ತಂಡದವರು ಮೂವರನ್ನೂ ರಕ್ಷಿಸಿ ದಡಕ್ಕೆ ತಂದಿದ್ದರು. ಮೂವರ ಪೈಕಿ ಗಂಭೀರ ಸ್ಥಿತಿಯಲ್ಲಿದ್ದ ಗಿರೀಶ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದು, ಉಳಿದಿ ಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.