Connect with us

LATEST NEWS

ಆಳ್ವಾಸ್ ನುಡಿಸಿರಿ ಸಮ್ಮೇಳನಾಧ್ಯಕ್ಷತೆ ಕುರಿತು ಫೇಸ್‌ಬುಕ್‌ನಲ್ಲಿ ಬಿಸಿಬಿಸಿ ಚರ್ಚೆ

ಆಳ್ವಾಸ್ ನುಡಿಸಿರಿ ಸಮ್ಮೇಳನಾಧ್ಯಕ್ಷತೆ ಕುರಿತು ಫೇಸ್‌ಬುಕ್‌ನಲ್ಲಿ ಬಿಸಿಬಿಸಿ ಚರ್ಚೆ

ಮಂಗಳೂರು ಸೆಪ್ಟೆಂಬರ್ 21: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನವೆಂಬರ್ 16 ರಿಂದ 18ರ ವರೆಗೆ ನಡೆಯಲಿರುವ ಆಳ್ವಾಸ್‌ ನುಡಿಸಿರಿ-2018 ರಾಷ್ಟ್ರೀಯ ಸಮ್ಮೇಳನದ ಸರ್ವಾಧ್ಯಕ್ಷತೆಯಾಗಿ ಆಯ್ಕೆಯಾಗಿರುವ ಹಂಪಿ ಕನ್ನಡ ವಿ.ವಿ. ಕುಲಪತಿ ಡಾ| ಮಲ್ಲಿಕಾ ಎಸ್‌. ಘಂಟಿ ಅವರ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧಗಳು ವ್ಯಕ್ತವಾಗುತ್ತಿದೆ.

ಕೆಲವು ಸಾಮಾಜಿಕ ಹೋರಾಟಗಾರರು ಮಲ್ಲಿಕಾ ಘಂಟಿ ಅವರ ಆಳ್ವಾಸ್ ನುಡಿಸಿರಿ ಸರ್ವಾಧ್ಯಕ್ಷತೆ ವಹಿಸುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿವರ್ಷ ನಡೆಯುತ್ತಿರೋ ಆಳ್ವಾಸ್ ನುಡಿಸಿರಿ ಪ್ರತಿ ವರ್ಷ ಒಂದಲ್ಲಾ ಒಂದು ವಿವಾದದಿಂದ ಸುದ್ದಿಯಾಗುತಿತ್ತು. ಈ ಹಿಂದೆ ಆಳ್ವಾಸ್ ನುಡಿಸಿರಿಗೆ ಪ್ರಗತಿಪರ ಚಿಂತಕರಾದ ಬರಗೂರು ರಾಮಚಂದ್ರಪ್ಪ, ಕಲ್ಬುರ್ಗಿ ಹಾಗೂ ಸಾಹಿತಿ ಅನಂತ್ ಮೂರ್ತಿ ಭಾಗವಹಿಸಿದಾಗಲೂ ಪ್ರಗತಿಪರ ವಲಯದಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.

ಪ್ರಗತಿಪರರ ವಿರೋಧಕ್ಕೆ ಆಳ್ವಾಸ್ ಸಂಸ್ಥೆ ಶಿಕ್ಷಣದ ಹೆಸರಿನಲ್ಲಿ ಶಿಕ್ಷಣದ ವ್ಯಾಪಾರೀಕರಣ ಮಾಡುತ್ತಿದೆ. ಜೊತೆಗೆ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ಕೋಮುವಾದ ಹಾಗೂ ಪಾಳೇಗಾರಿಕೆ ಸಂಸ್ಕೃತಿಯ ಪರವಾಗಿದ್ದಾರೆ.
ಜೊತೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕಳೆದ 12 ವರ್ಷಗಳಲ್ಲಿ ಸುಮಾರು 12 ಕ್ಕೂ ಅಧಿಕ ಆತ್ಮಹತ್ಯೆ ಪ್ರಕರಣಗಳೂ ನಡೆದಿವೆ. ಜೊತೆಗೆ ನಿಗೂಢ ಸಾವು ಪ್ರಕರಣಗಳೂ ನಡೆದಿವೆ. ಇಂತಹಾ ಸಂದರ್ಭದಲ್ಲಿ ಎಡಪಂಥೀಯ ಹಾಗೂ ಜನಪರ ವಿಚಾರಧಾರೆಗಳಲ್ಲಿ ಗುರುತಿಸಿಕೊಂಡಿರೋ ಸಾಹಿತಿಗಳು ಹಾಗೂ ಚಿಂತಕರು ಆಳ್ವಾಸ್ ನುಡಿಸಿರಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸೋ ಔಚಿತ್ಯ ಏನು ಎಂಬುವುದು ಪ್ರಗತಿಪರರ ವಾದವಾಗಿದೆ.

ಆಳ್ವಾಸ್ ವಿದ್ಯಾಸಂಸ್ಥೆಯ ವಿರುದ್ಧ ಹಲವಾರು ಪ್ರತಿಭಟನೆಗಳು ಹೋರಾಟಗಳು ನಡೆದಿದ್ದವು. ಈ ನಡುವೆ ಈ ಬಾರಿಯ ಆಳ್ವಾಸ್ ನುಡಿಸಿರಿ ಸಾಹಿತ್ಯ ಸಮ್ಮೇಳನಕ್ಕೆ ಪ್ರಗತಿಪರರೇ ಆಗಿರೋ ಡಾ. ಮಲ್ಲಿಕಾ ಘಂಟಿ ಆಯ್ಕೆಯಾಗಿರೋದು ಚರ್ಚೆಗೆ ಗ್ರಾಸವಾಗಿದೆ.

ಈ ಕುರಿತಂತೆ ತಮ್ಮ ‘ದಿ ಸ್ಟೇಟ್’ ಜಾಲತಾಣದಲ್ಲಿ ಪ್ರಕಟಿಸಿರುವ ತಮ್ಮ ಹೇಳಿಕೆಯಲ್ಲಿ ಮಲ್ಲಿಕಾ ಘಂಟಿ ತಮ್ಮ ನಿಲುವನ್ನು ಸ್ಟಪ್ಟಪಡಿಸಿದ್ದಾರೆ. ಆಳ್ವಾಸ್ ನುಡಿಸಿರಿಯಲ್ಲಿ ಭಾಗವಹಿಸುವ ತಮ್ಮ ನಿರ್ಧಾರ ಕುರಿತು ಪ್ರಶ್ನಿಸುತ್ತಿರುವವರು ಚರ್ಚೆಯಲ್ಲಿ ಗೌರಿ ಲಂಕೇಶ್ ಹೆಸರು ಪ್ರಸ್ತಾಪಿಸುತ್ತಿರುವುದನ್ನು ಮಲ್ಲಿಕಾ ಘಂಟಿ ಆಕ್ಷೇಪಿಸಿದ್ದಾರೆ.

‘ದಲಿತ ಬಂಡಾಯ ಸಾಹಿತ್ಯ ಸಂಘಟನೆಗೆ ಹತ್ತು ವರ್ಷ ತುಂಬಿದ ಸಂದರ್ಭ ಬೆಂಗಳೂರಿನಲ್ಲಿ ನಡೆದ ಸಮ್ಮೇಳನದಲ್ಲಿ ‘ಯಾವುದೇ ಸಂಘಟನೆ, ವೇದಿಕೆಗಳು ಕರೆದರೂ ಬಂಡಾಯದ ಮಿತ್ರರು ಹೋಗಬೇಕು; ಅಲ್ಲಿ ನಮ್ಮ ವಿಚಾರಗಳನ್ನು ಹಂಚಿಕೊಳ್ಳಬೇಕು’ ಎಂಬ ನಿರ್ಣಯ ಕೈಗೊಂಡ ನೆನಪಿದೆ. ಆ ಕಾರಣದಿಂದಲೇ ಈ ಹಿಂದೆ ಆಳ್ವಾಸ್ ನುಡಿಸಿರಿಯ ಆಹ್ವಾನವನ್ನು ಹಲವು ಹಿರಿಯರು ಒಪ್ಪಿಕೊಂಡಿದ್ದರು. ಹಿರಿಯರು ಈಗಾಗಲೇ ಹಂಚಿಕೊಂಡಿರುವ ವೇದಿಕೆಯನ್ನು ಬಳಸಿಕೊಳ್ಳುವುದರ ಬಗ್ಗೆ ನನಗೆ ಸ್ಪಷ್ಟತೆಯಿದೆ ಎಂದು ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *