Connect with us

LATEST NEWS

ಯುವತಿಯರ ಸ್ಕೂಟರ್ ಸರ್ಕಸ್ – ಸೀದಾ ಮನೆ ಛಾವಣೆ ನುಗ್ಗಿದ ಸ್ಕೂಟರ್

ಇಂಡೋನೇಷ್ಯಾ ಮಾರ್ಚ್ 13: ವೇಗವಾಗಿ ಸ್ಕೂಟರ್ ಓಡಿಸಿಕೊಂಡ ಬಂದ ಇಬ್ಬರು ಯುವತಿಯರು ಗಾಡಿ ಬ್ಯಾಲೆನ್ಸ್ ತಪ್ಪಿ ಸೀದಾ ಮನೆಯೊಂದರ ಛಾವಣೆ ಮೇಲೆ ಬಿದ್ದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.


ರಸ್ತೆ ಮೇಲೆ ವೇಗವಾಗಿ ಹೋಗ್ತಿದ್ದ ವೇಳೆ ಸ್ಕೂಟರ್​​ನ ಬ್ರೇಕ್​ ಫೇಲ್ಯೂರ್​ ಆಗಿದೆ. ಪರಿಣಾಮ ನಿಯಂತ್ರಣ ತಪ್ಪಿದ ಬೈಕ್ ಸೀದಾ ಹೋಗಿ ಮನೆಯ ಛಾವಣಿಗೆ ಹಾರಿದೆ. ಪರಿಣಾಮ ಇಬ್ಬರು ಯುವತಿಯರು ಸ್ಕೂಟಿ ಸಮೇತ ಮನೆ ಮೇಲೆ ಲಾಕ್ ಆಗಿದ್ದಾರೆ. ಮನೆಗೆ ಹಾಕಲಾಗಿದ್ದ ಹೆಂಚುಗಳು ಪುಡಿಪುಡಿಯಾಗಿದೆ. ಮನೆಗೂ ಹಾನಿಯಾಗಿದೆ. ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಾರಪ್ಪ ಇವರಿಗೆ ಡ್ರೈವಿಂಗ್​ ಲೈಸೆನ್ಸ್​ ಕೊಟ್ಟಿದ್ದು ಎಂದೆಲ್ಲಾ ಜನ ಪ್ರಶ್ನೆ ಮಾಡ್ತಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *