LATEST NEWS
ಮಹಾಕುಂಭಮೇಳದಲ್ಲಿ 42 ಕೋಟಿಗೂ ಅಧಿಕ ಜನರಿಂದ ಪುಣ್ಯಸ್ನಾನ

ಪ್ರಯಾಗರಾಜ್ ಫೆಬ್ರವರಿ 08 : ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಈವರೆಗೆ 42 ಕೋಟಿಗೂ ಅಧಿಕ ಜನರು ಪುಣ್ಯ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರಕಾರ ತಿಳಿಸಿದೆ.
ಮಹಾಕುಂಭ ಮೇಳ ಪೂರ್ಣಗೊಳ್ಳಲು 18 ದಿನಗಳು ಬಾಕಿಯಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರಕಾರದ ನಿರೀಕ್ಷೆಯನ್ನೂ ಮೀರಿ ಜನರು ಪುಣ್ಯಸ್ನಾನ ಮಾಡಿದ್ದಾರೆ. ಹೀಗೆ ಮುಂದುವರಿದಲ್ಲಿಈ ಬಾರಿಯ ಕುಂಭ ಮುಗಿಯುವ ವೇಳೆಗೆ 50 ಕೋಟಿಗೂ ಹೆಚ್ಚು ಜನರು ಪುಣ್ಯಸ್ನಾನ ಮಾಡುವ ನಿರೀಕ್ಷೆಯಿದೆ.

ಮೌನಿ ಅಮಾವಾಸ್ಯೆಯಂದು 8 ಕೋಟಿಗೂ ಹೆಚ್ಚು ಮಂದಿ ಪುಣ್ಯ ಸ್ನಾನ ಮಾಡಿದ್ದಾರೆ. ಮಕರ ಸಂಕ್ರಾಂತಿಯಂದು 3.5 ಕೋಟಿಗೂ ಹೆಚ್ಚು ಜನರು ಸ್ನಾನ ಮಾಡಿದ್ದಾರೆ. ವಸಂತ ಪಂಚಮಿಯಂದು 2.5 ಕೋಟಿಗೂ ಹೆಚ್ಚು ಜನರು ಪುಣ್ಯಸ್ನಾನ ಮಾಡಿದ್ದಾರೆ ಎಂದು ಸರಕಾರ ತಿಳಿಸಿದೆ. ಮಹಾಶಿವರಾತ್ರಿಯಂದು ಅತ್ಯಧಿಕ ಮಂದಿ ಪ್ರಯಾಗರಾಜ್‌ಗೆ ಭೇಟಿ ನೀಡಿ ಅಮೃತ ಸ್ನಾನ ಮಾಡುವ ನಿರೀಕ್ಷೆಯಿದೆ.
1 Comment