LATEST NEWS
” ಮಹಾ ” ಚಂಡಮಾರುತ ಎಫೆಕ್ಟ್ ಸಮುದ್ರಿಂದ ಬೋಟ್ ಗಳನ್ನು ಹಿಂದಕ್ಕೆ ಕಳುಹಿಸುತ್ತಿರುವ ಕೋಸ್ಟ್ ಗಾರ್ಡ್
” ಮಹಾ ” ಚಂಡಮಾರುತ ಎಫೆಕ್ಟ್ ಸಮುದ್ರಿಂದ ಬೋಟ್ ಗಳನ್ನು ಹಿಂದಕ್ಕೆ ಕಳುಹಿಸುತ್ತಿರುವ ಕೋಸ್ಟ್ ಗಾರ್ಡ್
ಮಂಗಳೂರು ಅಕ್ಟೋಬರ್ 31: ಅರಬ್ಬಿ ಸಮುದ್ರದ ಮಾಲ್ದೀವ್ಸ್-ಕೊಮೋರಿನ್ ಮತ್ತು ಲಕ್ಷ ದ್ವೀಪವನ್ನು ಸಂಧಿಸುವ ಪ್ರದೇಶದಲ್ಲಿ ಉಂಟಾದ ವಾಯಭಾರ ಕುಸಿತ ‘ಮಹಾ’ ಚಂಡಮಾರುತವಾಗಿ ಬದಲಾಗುವ ಎಲ್ಲ ಸಾಧ್ಯತೆಗಳಿದ್ದು, ರಾಜ್ಯದ ಕರಾವಳಿಗೂ ಮಹಾ ಚಂಡಮಾರುತ ಪರಿಣಾಮ ಇರುವುದರಿಂದ ನವೆಂಬರ್ 1 ರ ತನಕ ಮೀನುಗಾರಿಕೆಯನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಮಹಾ ಚಂಡ ಮಾರುತದ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಬಂದರುಗಳಲ್ಲಿ ಎಚ್ಚರಿಕೆ ಸಂಕೇತ 3 ತೋರಿಸಲು ಹವಾಮಾನ ಇಲಾಖೆ ಸೂಚಿಸಿದೆ.
ಈಗಾಗಲೇ ನವೆಂಬರ್ 1 ರ ತನಕ ಮೀನುಗಾರರು ಮೀನುಗಾರಿಕೆ ತೆರಳದಂತೆ ಸೂಚಿಸಲಾಗಿದ್ದು, ಈಗಾಗಲೇ ಮೀನುಗಾರಿಕೆಗೆ ತೆರಳಿದ್ದ ಬೋಟ್ ಗಳನ್ನು ಕೋಸ್ಟ್ ಗಾರ್ಡ್ ಹಿಂದಕ್ಕೆ ಕಳುಹಿಸುತ್ತಿದೆ. ಸಂಭಾವ್ಯ ಅಪಾಯ ತಡೆಯುವ ನಿಟ್ಟಿನಲ್ಲಿ ಭಾರತೀಯ ತಟಕ್ಷಣಾ ಪಡೆ ಸನ್ನದ್ಧವಾಗಿದೆ. ಗೋವಾದಲ್ಲಿ ಕಾವಲು ನೌಕೆ ವರಾಹ ಮತ್ತು ಮಂಗಳೂರಿನಲ್ಲಿ ವಿಕ್ರಮ್, ಫಾಸ್ಟ್ ಪ್ಯಾಟ್ರೋಲ್ ನೌಕೆಗಳಾದ ಅಪೂರ್ವ, ಅಮರ್ಥ್ಯ, ರಾಜ್‌ದೂತ್ ಮತ್ತು ಸಾವಿತ್ರಿ ಫುಲೆ ಮತ್ತು ಒಂದು ವಿಮಾನವನ್ನು ಸಿದ್ಧಗೊಳಿಸಲಾಗಿದೆ.
ಮಂಗಳೂರಿನ ಕೋಸ್ಟ್‌ಗಾರ್ಡ್ ರಾಡಾರ್ ಆಪರೇಟಿಂಗ್ ಕೇಂದ್ರದಿಂದ ಮೀನುಗಾರರಿಗೆ ಸ್ಥಳೀಯ ಭಾಷೆಗಳಲ್ಲಿ ಎಚ್ಚರಿಕೆಯ ಸಂದೇಶಗಳನ್ನು ರವಾನಿಸಲಾಗುತ್ತಿದೆ. ಮೀನುಗಾರಿಕಾ ಬೋಟ್‌ಗಳನ್ನು ಪತ್ತೆ ಹಚ್ಚಿ ಹಿಂದಕ್ಕೆ ಕಳುಹಿಸುವ ನಿಟ್ಟಿನಲ್ಲಿ ಕೋಸ್ಟ್‌ಗಾರ್ಡ್ ಹಡಗು ಮತ್ತು ವಿಮಾನಗಳು ಸಮುದ್ರದಲ್ಲಿ ಪಹರೆ ನಡೆಸುತ್ತಿವೆ ಎಂದು ತಟರಕ್ಷಣಾ ಪಡೆ ಕಮಾಂಡರ್ ಎಸ್.ಎಸ್.ದಸಿಲಾ ತಿಳಿಸಿದ್ದಾರೆ.
ಈಗಾಗಲೇ ಮಹಾ ಚಂಡಮಾರುತ ಹಿನ್ನಲೆ ಕರಾವಳಿಯಾದ್ಯಂತ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಮಳೆಯ ಜೊತೆ ಗಾಳಿಯೂ ಜೋರಾಗಿ ಬೀಸುತ್ತಿದೆ.