LATEST NEWS
ಸರಕಾರದ ವತಿಯಿಂದ ರಾಜ್ಯದೆಲ್ಲಡೆ ಶ್ರೀ ಮಧ್ವಾಚಾರ್ಯರ ಜಯಂತಿ ಆಚರಣೆಗೆ ಪಲಿಮಾರು ಮಠಾಧೀಶರ ಒತ್ತಾಯ

ಉಡುಪಿ ಅಕ್ಟೋಬರ್ 15: ರಾಜ್ಯದಲ್ಲೇ ಅವತರಿಸಿದ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ಸರಕಾರ ರಾಜ್ಯದೆಲ್ಲಡೆ ಆಚರಿಸುವಂತಾಗಬೇಕೆಂದು ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಸರಕಾರವನ್ನು ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು ಭಾರತದಲ್ಲಿ ಅವತರಿಸಿದ ಅನೇಕ ದಾರ್ಶನಿಕರಲ್ಲಿ ಅದರಲ್ಲೂ ಆಚಾರ್ಯ ತ್ರಯರಲ್ಲಿ ಓರ್ವರೆನಿಸಿ ಕನ್ನಡದ ನೆಲದಲ್ಲಿ ಅವತರಿಸಿ , ಸರಳ ಭಕ್ತಿ ಸಿದ್ಧಾಂತವನ್ನು ಪ್ರತಿಪಾದಿಸಿ , ಕನ್ನಡದ ನೆಲದಲ್ಲಿ ಹರಿದಾಸ ಸಾಹಿತ್ಯ ಸಮೃದ್ಧವಾಗಿ ಬೆಳೆಯಲು ಮೂಲ ಕರ್ತೃಗಳಾಗಿ , ಉಡುಪಿಯಲ್ಲಿ ಶ್ರೀ ಕೃಷ್ಣ ನನ್ನು ಪ್ರತಿಷ್ಠಾಪಿಸಿ ನಾಡಿನ ಕೀರ್ತಿಯನ್ನು ಬೆಳಗಿದ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತೀ ಯನ್ನು ಸರ್ಕಾರವು ಆಚರಿಸುವಂತಾಗಬೇಕು ಎಂದು ಶ್ರೀ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಒತ್ತಾಯಿಸಿದ್ದಾರೆ . ರಾಜ್ಯಾದ್ಯಂತ ಎಲ್ಲಾ ಕಡೆ ಜಯಂತಿ ಆಚರಣೆ ನಡೆಸಬೇಕೆಂದು ಹೇಳಿದ ಅವರು ಜಯಂತಿಗೆ ರಜೆ ನೀಡಬೇಕೆಂಬ ಒತ್ತಾಯ ಇಲ್ಲ ಎಂದು ತಿಳಿಸಿದ್ದಾರೆ

ಸರ್ಕಾರವು ಅನೇಕ ಮಹಾತ್ಮರ ಜಯಂತೀ ಪುಣ್ಯತಿಥಿಗಳನ್ನು ಆಚರಿಸುವಂತೆ ಮಧ್ವ ಜಯಂತಿಯನ್ನೂ ಆಚರಿಸಬೇಕು .ಎಂದು ಶ್ರೀಗಳು ಒತ್ತಾಯಿಸಿದ್ದಾರೆ.