LATEST NEWS
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೆಂಗಣ್ಣು ಕಾಯಿಲೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಕೆಂಗಣ್ಣು ಕಾಯಿಲೆ ಕಾಣಿಸಿಕೊಂಡಿದ್ದು, ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲೆಯ ಎಲ್ಲ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ಸೂಚನೆ ನೀಡಲಾಗಿದೆ.
ಬಜಪೆ ಪರಿಸರದಲ್ಲಿ ವಾರದ ಹಿಂದೆ ಆರಂಭ ಗೊಂಡ ಈ ಕಾಯಿಲೆ ಹಲವು ಮಂದಿಗೆ ಹರಡಿದೆ. ಕೆಂಗಣ್ಣು ಸಮಸ್ಯೆ ಹೊಂದಿದ ತಾಯಿ ಹಾಗೂ ಮಗುವು ಚುಚ್ಚು ಮದ್ದಿಗೆ ವಾರ ಕಳೆದು ಬರುವಂತೆ ಕೆಲವು ಕಡೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೂಚಿಸಲಾಗಿದೆ. ಇನ್ನು ಮಂಗಳೂರು ನಗರ, ಗ್ರಾಮೀಣ ಭಾಗಕ್ಕೂ ಈ ಕಾಯಿಲೆ ಹರಡುತ್ತಿದ್ದು, ಅಡ್ಯಾರ್, ಪುತ್ತೂರು, ಬೆಳ್ತಂಗಡಿ ಭಾಗ ದಿಂದಲೂ ವರದಿ ಬರುತ್ತಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
ಗಣ್ಣು ಒಬ್ಬರಿಂದ ಮತ್ತೂಬ್ಬರಿಗೆ ಹರಡುವ ಕಾಯಿಲೆ. ಬಾಧಿತ ವ್ಯಕ್ತಿ ಕಣ್ಣನ್ನು ಮುಟ್ಟಿ ಅದೇ ಕೈಯಿಂದ ವಸ್ತುಗಳನ್ನು ಮುಟ್ಟಿದಾಗ ರೋಗಾಣುಗಳು ಅಲ್ಲಿಗೆ ಅಂಟಿಕೊಳ್ಳುತ್ತವೆ. ಆ ವಸ್ತುವನ್ನು ಮುಟ್ಟಿದ ವ್ಯಕ್ತಿಗೂ ಹರಡುತ್ತದೆ. ಆದ್ದರಿಂದ ಜಾಗ್ರತೆ ವಹಿಸುವುದೇ ಇದಕ್ಕಿರುವ ಮದ್ದು. ಕಣ್ಣಿನ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ.