Connect with us

KARNATAKA

ಮಡಿಕೇರಿ : ಕಾಣೆಯಾಗಿದ್ದ ವ್ಯಕ್ತಿಯ ಶವ ಕೆರೆಯಲ್ಲಿ ಪತ್ತೆ, ಮೃತದೇಹ ದರ್ಶನಕ್ಕೆ ಬಂದವರ ಕಾರು ಅಪಘಾತಕ್ಕೆ ಓರ್ವ ಮೃತ್ಯು..!

ಮಡಿಕೇರಿ :  ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾದ್ರೆ, ಮೃತ ವ್ಯಕ್ತಿಯ ದರ್ಶನಕ್ಕೆ ಬುತ್ತಿದ್ದವರ ಕಾರು ಅಪಘಾತಕ್ಕೀಡಾಗಿ ಓರ್ವ ಮೃತಪಟ್ಟ ಘಟನೆ ಕೊಡಗಿನ ಶುಂಟಿಕೊಪ್ಪದಲ್ಲಿ ನಡೆದಿದೆ.

ಕಳೆದ ಭಾನುವಾರದಿಂದ ಕಾಣೆಯಾಗಿದ್ದ ಸುಂಟಿಕೊಪ್ಪ ಸಮೀಪದ ಸೆವೆಂತ್ ಮೈಲ್ ನಿವಾಸಿ ಪೌಲ್ ಡಿಸೋಜ ಎಂಬುವವರ ಮೃತದೇಹ ಇಂದು ಬೆಳಗ್ಗೆ ಅಲ್ಲಿನ ಸೌಭಾಗ್ಯ ತೋಟದ ಕೆರೆಯಲ್ಲಿ ಪತ್ತೆಯಾಗಿದೆ.

ನಾಲ್ಕು ದಿವಸಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ ಮೈಕಲ್ ಎಲ್ಲಿಯೂ ಕಂಡುಬಾರದ ಹಿನ್ನೆಲೆ ಮನೆಯವರು ಪೊಲೀಸ್ ದೂರು ದಾಖಲಿಸಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು.

ಆದರೆ ಗುರುವಾರ ಬೆಳಿಗ್ಗೆ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾದ ಪೌಲ್ ಡಿಸೋಜರವರ ದೇಹದಲ್ಲಿ ಕಲ್ಲುಗಳು ಕಟ್ಟಿಕೊಂಡಿರುವುದು ಗೋಚರಿಸಿದೆ. ಹೀಗಾಗಿ ಇವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಹೇಳಲಾಗಿದೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಇನ್ನು ಇದೇ ಸಂಧರ್ಭದಲ್ಲಿ ಮೃತಪಟ್ಟ ಸಂಬಂಧಿಯ ಅಂತಿಮ ದರ್ಶನಕ್ಕೆಂದು ಬರುತ್ತಿದ್ದ ಕಾರು ಅಪಘಾತಕ್ಕಿಡಾಗಿ ಓರ್ವ ಸಾವನಪ್ಪಿ ನಾಲ್ವರು ಗಾಯಗೊಂಡಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ಪೌಲ್ ಅವರ ಅಣ್ಣನ ಮಕ್ಕಳು ಸಾವಿನ ಸುದ್ದಿ ಅರಿತು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಕಾರಿನಲ್ಲಿ ಬರುತ್ತಿದ್ದರು. ದುರಾದೃಷ್ಟಕ್ಕೆ ಇವರು ಪ್ರಯಾಣಿಸುತ್ತಿದ್ದ ಕಾರು ಬೆಂಗಳೂರು ಬಳಿಯ ಬಿಡದಿಯಲ್ಲಿ ಡಿವೈಡರ್ ಗೆ ಅಪ್ಪಳಿಸಿ ಮಗುಚಿ ಬಿದ್ದಿದೆ. ಪರಿಣಾಮ ಕಾರಿನಡಿಯಲ್ಲಿ ಸಿಲುಕಿ ಪೌಲ್ ಡಿಸೋಜರವರ ಅಣ್ಣನ ಮಗನಾದ ಸಿಲ್ವಿನ್ ಡಿಸೋಜ ಅವರು ಕೊನೆಯುಸಿರು ಎಳೆದಿದ್ದಾರೆ. ಇನ್ನುಳಿದವರಾದ ಪ್ರವೀಣ್ ಡಿಸೋಜ, ವನಿಷಾ ಡಿಸೋಜ ಹಾಗೂ ಕಾರಿನಲ್ಲಿದ್ದ ಇನ್ನಿಬ್ಬರು ಗಾಯಗೊಂಡು ಅಲ್ಲಿನ ಅಕ್ಷಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೆಡೆ ಪೌಲ್ ಡಿಸೋಜ ಅವರ ಅಕಾಲಿಕ ಸಾವಿನಿಂದ ಅವರ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದ್ದಾರೆ ಇನ್ನೊಂದೆಡೆ ಅದೇ ಕುಟುಂಬದ ಇನ್ನೋರ್ವ ವಾಹನ ಅಪಘಾತದಲ್ಲಿ ಸಾವಿಗೀಡಾಗಿರುವುದು ವಿಧಿಯ ಕ್ರೂರ ಅಟ್ಟಹಾಸಕ್ಕೆ ಶಾಪ ಹಾಕುವತಾಗಿದ್ದು ಎರಡೂ ಕುಟುಂಬಗಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

Share Information
Advertisement
Click to comment

You must be logged in to post a comment Login

Leave a Reply